ಚೀನಾದಲ್ಲಿನ ಕಾರ್ಖಾನೆಗಳಲ್ಲಿ ಬಂಧಿತ ಉಯಿಘರ್ ಮುಸ್ಲಿಂರಿಂದ 'ಬಲವಂತದ ದುಡಿಮೆ'!

ಕೊರೋನಾ ವೈರಸ್ ನಿಂದಾಗಿ ಚೀನಾ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರತಿಷ್ಠಿತ ಉತ್ಪಾದನ ಸಂಸ್ಧೆಗಳು ಮುಚ್ಚಿವೆ. ಇಂತಹದರಲ್ಲಿ ವಿಶ್ವದ ಕೆಲ ಬ್ರಾಂಡ್ ಕಂಪನಿಗಳಾದ ಆ್ಯಪಲ್, ಸೋನಿ ಮತ್ತು ಬಿಎಂಡಬ್ಲ್ಯೂ ಸೇರಿದಂತೆ ಹಲವು ಉತ್ಸಾದಕ ಕಾರ್ಖಾನೆಗಳಲ್ಲಿ ಬಂಧಿತ ಉಯಿಘರ್ ಮುಸ್ಲಿಂರಿಂದ ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕ್ಸಿನ್‌ಜಿಯಾಂಗ್: ಕೊರೋನಾ ವೈರಸ್ ನಿಂದಾಗಿ ಚೀನಾ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರತಿಷ್ಠಿತ ಉತ್ಪಾದನ ಸಂಸ್ಧೆಗಳು ಮುಚ್ಚಿವೆ. ಇಂತಹದರಲ್ಲಿ ವಿಶ್ವದ ಕೆಲ ಬ್ರಾಂಡ್ ಕಂಪನಿಗಳಾದ ಆ್ಯಪಲ್, ಸೋನಿ ಮತ್ತು ಬಿಎಂಡಬ್ಲ್ಯೂ ನಂತಹ ಉತ್ಸಾದಕ ಕಾರ್ಖಾನೆಗಳಲ್ಲಿ ಬಂಧಿತ ಉಯಿಘರ್ ಮುಸ್ಲಿಂರಿಂದ ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.

ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಈ ಸ್ಫೋಟಕ ಆರೋಪ ಮಾಡಿದ್ದು ಚೀನಾದಲ್ಲಿ ಬಂಧಿತರಾಗಿರುವ ಉಯಿಘರ್ ಮುಸ್ಲಿಂರನ್ನು ಬಳಸಿಕೊಂಡು ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದ್ದು ಈ ಆರೋಪ ಇದೀಗ ವಿಶ್ವದಾದ್ಯಂತ ಪ್ರತಿಧ್ವನಿಸಬಹುದು. 

ಚೀನಾದ ಸರ್ಕಾರವು 80,000 ಅಥವಾ ಅದಕ್ಕಿಂತ ಹೆಚ್ಚಿನ ಉಯಿಘರ್‌ ಮುಸ್ಲಿಂರನ್ನು ಕ್ಸಿನ್‌ಜಿಯಾಂಗ್‌ನ ಶಿಬಿರಗಳಿಂದ ಚೀನಾದಾದ್ಯಂತ ಇರುವ ಬ್ರಾಂಡ್ ಕಾರ್ಖಾನೆಗಳಿಗೆ ವರ್ಗಾಯಿಸಿದೆ ಎಂದು ಆಸ್ಟ್ರೇಲಿಯಾದ ಕಾರ್ಯತಂತ್ರ ನೀತಿ ಸಂಸ್ಥೆ ತಿಳಿಸಿದೆ.

ತಂತ್ರಜ್ಞಾನ, ಬಟ್ಟೆ ಮತ್ತು ವಾಹನ ಕ್ಷೇತ್ರಗಳಲ್ಲಿ ಕನಿಷ್ಠ 83 ಜಾಗತಿಕ ಬ್ರಾಂಡ್‌ಗಳ ಪೂರೈಕೆ ಕಾರ್ಖಾನೆಗಳಲ್ಲಿ ಉಯಿಘರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಥಿಂಕ್ ಟ್ಯಾಂಕ್ ಹೇಳಿದೆ.

ಚೀನಾದಾದ್ಯಂತದ ಕೆಲವು ಕಾರ್ಖಾನೆಗಳು ಬಲವಂತದ ಉಯಿಘರ್ ಕಾರ್ಮಿಕರನ್ನು ರಾಜ್ಯ ಪ್ರಾಯೋಜಿತ ಕಾರ್ಮಿಕ ವರ್ಗಾವಣೆ ಯೋಜನೆಯಡಿಯಲ್ಲಿ ಬಳಸುತ್ತಿವೆ. ಅದು ಜಾಗತಿಕ ಪೂರೈಕೆಗೆ ಕಳಂಕ ತರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com