ಸಂಗ್ರಹ ಚಿತ್ರ
ವಿದೇಶ
ದಕ್ಷಿಣ ಕೊರಿಯಾ: ಕೊರೋನಾ ಸೋಂಕಿತರ ಸಂಖ್ಯೆ 4,212ಕ್ಕೆ ಏರಿಕೆ, 22 ಸಾವು
ದಕ್ಷಿಣ ಕೊರಿಯಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ನಿನ್ನೆ ಒಂದೇ ದಿನ 476 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ನಿನ್ನೆ ಒಂದೇ ದಿನ 476 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಆ ಮೂಲಕ ದಕ್ಷಿಣ ಕೊರಿಯಾದಲ್ಲಿ ಈ ವರೆಗೂ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿಗೊಳಪಟ್ಟವರ ಸಂಖ್ಯೆ 4,212ಕ್ಕೇರಿದೆ. ಅಂತೆಯೇ ವೈರಸ್ ಸೋಂಕಿನಿಂದ ಸಾವನ್ನಪ್ಪಿದರ ಸಂಖ್ಯೆ 22ಕ್ಕೇರಿದೆ ಎಂದು ಕೊರಿಯಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಲ್ಲಿನ ದಯಾಗು ಪ್ರದೇಶದಲ್ಲಿ 377 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಒಂದು ಪ್ರದೇಶದಲ್ಲಿ ವರದಿಯಾದ ಅತಿ ಹೆಚ್ಚು ಸೋಂಕಿತ ಪ್ರಕರಣಗಳಾಗಿವೆ. ಏತನ್ಮಧ್ಯೆ 31 ಜನರು ಚೇತರಿಕೆ ಹೊಂದಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

