ಕೊರೋನಾ ಭೀತಿ: ವಿದೇಶಗಳಲ್ಲಿ ಮಾಸ್ಕ್ ಗಳಿಗೆ ಹಾಹಾಕಾರ, ಫ್ರೆಂಚ್ ಆಸ್ಪತ್ರೆಯಲ್ಲಿ 2,000 ಮಾಸ್ಕ್ ಗಳ ಕಳ್ಳತನ

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ವಿಶ್ವದಾದ್ಯಂತ ಭೀತಿ ಹುಟ್ಟಿಸಿದ್ದು, ವೈರಸ್ ನಿಂದ ದೂರ ಉಳಿಯುವ ಸಲುವಾಗಿ ಧರಿಸುವ ಮಾಸ್ಕ್ ಗಳಿಗಾಗಿ ಇದೀಗ ವಿದೇಶಗಳಲ್ಲಿ ಆಹಾಕಾರ ಶುರುವಾಗಿದೆ. ಇದರಂತೆ ಮಾಸ್ಕ್ ಗಳ ಕಳ್ಳತನ ಕೂಡ ಶುರುವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾರ್ಸಿಲ್ಲೆ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ವಿಶ್ವದಾದ್ಯಂತ ಭೀತಿ ಹುಟ್ಟಿಸಿದ್ದು, ವೈರಸ್ ನಿಂದ ದೂರ ಉಳಿಯುವ ಸಲುವಾಗಿ ಧರಿಸುವ ಮಾಸ್ಕ್ ಗಳಿಗಾಗಿ ಇದೀಗ ವಿದೇಶಗಳಲ್ಲಿ ಆಹಾಕಾರ ಶುರುವಾಗಿದೆ. ಇದರಂತೆ ಮಾಸ್ಕ್ ಗಳ ಕಳ್ಳತನ ಕೂಡ ಶುರುವಾಗಿದೆ. 

ದಕ್ಷಿಣ ಫ್ರೆಂಚ್ ನಗರದ ಮಾರ್ಸಿಲ್ಲೆಯಲ್ಲಿರುವ ಆಸ್ಪತ್ರೆಯಲ್ಲಿ 2,000 ಮಾಸ್ಕ್ ಗಳ ಕಳ್ಳತನವಾಗಿರುವುದಾಗಿ ವರದಿಗಳು ತಿಳಿಸಿವೆ. 

ಆಸ್ಪತ್ರೆ ಸಿಬ್ಬಂದಿಗಳು ಹಾಗೂ ರೋಗಿಗಳಿಗೆ ನೀಡಲಾಗುತ್ತಿದ್ದ ಮಾಸ್ಕ್ ಗಳನ್ನು ದರೋಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. 

ಮಾಸ್ಕ್ ಗಳು ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಲು ಆರಂಭಿಸಿದ್ದಾರೆಂದು ತಿಳಿದುಬಂದಿದೆ. 

ಪ್ರಸ್ತುತ ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆಯಲ್ಲಿ ಅಗತ್ಯ ಮಾಸ್ಕ್ ಗಳು ಲಭ್ಯವಿದ್ದು, ಪರಿಸ್ಥಿತ ಸುಧಾರಿಸಿದೆ. ಇದೀಗ ಮಾಸ್ಕ್ ಹಾಗೂ ಸ್ಯಾನಿಟೈಸಿಂಗ್ ಹ್ಯಾಂಡ್ ಜೆಲ್ ಗಳನ್ನು ರಕ್ಷಣೆಗೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಡುವೆ ಫ್ರೆಂಚ್ ನಲ್ಲಿ ವೈರಸ್'ಗೆ ಈ ವರೆಗೂ ನಾಲ್ವರು ಬಲಿಯಾಗಿದ್ದು, 204 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com