ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾವೈರಸ್: ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ 21 ಜನರಿಗೆ ಸೋಂಕು ದೃಢ

ಕ್ಯಾಲಿಫೋರ್ನಿಯಾ ಕರಾವಳಿಯ ಸಮುದ್ರದಲ್ಲಿ ನಿಂತಿರುವ ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿನ 21 ಜನರಿಗೆ ಮಾರಣಾಂತಿಕ ಕೊರೋನಾವೈರಸ್ ದೃಢಪಟ್ಟಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಶನಿವಾರ ಖಚಿತಪಡಿಸಿದ್ದಾರೆ
Published on

ವಾಷಿಂಗ್ಟನ್ : ಕ್ಯಾಲಿಫೋರ್ನಿಯಾ ಕರಾವಳಿಯ ಸಮುದ್ರದಲ್ಲಿ ನಿಂತಿರುವ ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿನ 21 ಜನರಿಗೆ ಮಾರಣಾಂತಿಕ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಶನಿವಾರ ಖಚಿತಪಡಿಸಿದ್ದಾರೆ. 

ಕೊರೋನಾ ವೈರಸ್ ದೃಢಪಟ್ಟವರಲ್ಲಿ ಹಡಗಿನ 19 ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರು ಸೇರಿದ್ದಾರೆ" ಎಂದು ಅವರು ತಿಳಿಸಿರುವುದಾಗಿ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಈ ಹಿಂದೆ ಹಡಗು ಪ್ರಯಾಣ ಬೆಳೆಸಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟು, ಆತ ಮೃತಪಟ್ಟ ನಂತರ ಪರೀಕ್ಷೆ ಮಾಡಲಾಗಿದೆ.  ಫೆ 21 ರಂದು ಮೆಕ್ಸಿಕೊದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಬಂದ ಅದೇ ಹಡಗಿನಲ್ಲಿದ್ದ. 19 ಹಡಗಿನ ಸಿಬ್ಬಂದಿ ಹಾಗೂ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಹೇಳಲಾಗಿದೆ. 

ಹಡಗಿನಲ್ಲಿರುವ 35000 ಜನರ ಪೈಕಿಯಲ್ಲಿ ಯುಎಸ್ ಆರೋಗ್ಯ ಅಧಿಕಾರಿಗಳು ಒಟ್ಟಾರೆಯಾಗಿ 46 ಜನರನ್ನು ಪರೀಕ್ಷಿಸಿದ್ದಾರೆ.ಕೊರೋನಾ ವೈರಸ್  ಇರುವಿಕೆಯನ್ನು ದೃಢಪಡಿಸಿದ ನಂತರ  ಹಡಗನ್ನು ವಾಣಿಜ್ಯೇತರ ಬಂದರಿಗೆ ತರಲು ನಿರ್ಧರಿಸಲಾಯಿತು. ಹಡಗಿನಲ್ಲಿದ್ದ ಪ್ರತಿಯೊಬ್ಬರನ್ನು ಪರೀಕ್ಷೆ ನಡೆಸಲಾಗಿದೆ ಎಂದು  ಪೆನ್ಸ್ ಹೇಳಿದ್ದಾರೆ. 

ಜಾಗತಿಕವಾಗಿ 101,000 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, 3, 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 55, 800 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com