ಸಾಂದರ್ಭಿಕ ಚಿತ್ರ
ವಿದೇಶ
ಕೊರೋನಾ ಸೋಂಕು: ಇರಾನ್ ಖೈದಿಗಳಿಗೆ ತಾತ್ಕಾಲಿಕ ಬಿಡುಗಡೆ ಭಾಗ್ಯ
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾನಿನ ಸೆರೆಮನೆಗಳಲ್ಲಿರುವ 70 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿರುವುದಾಗಿ ಇರಾನ್ ಸೋಮವಾರ ತಿಳಿಸಿದೆ.
ಟೆಹರಾನ್: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾನಿನ ಸೆರೆಮನೆಗಳಲ್ಲಿರುವ 70 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿರುವುದಾಗಿ ಇರಾನ್ ಸೋಮವಾರ ತಿಳಿಸಿದೆ.
ನಿರ್ದಿಷ್ಟ ಅವಧಿಯ ಬಳಿಕ ಇವರು ಜೈಲುಗಳಿಗೆ ಮರಳಬೇಕಾಗಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
ಕೊರೊನಾ ಸೋಂಕು ಜೈಲುಗಳಲ್ಲಿ ಹರಡಿದಲ್ಲಿ ಪರಿಸ್ಥಿತಿ ನಿಯಂತ್ರಣ ಕಷ್ಟಕರವಾಗುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಪ್ರಕಟಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ