

ವಾಷಿಂಗ್ಟನ್: ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವನ್ನೇ ಕೊರೋನಾ ವೈರಸ್ ನಡುಗಿಸುತ್ತಿದ್ದು ಸೆನೆಟರ್ ರಾಂಡ್ ಪೌಲ್ ಸೋಂಕಿಗೆ ತುತ್ತಾಗಿದ್ದಾರೆ.
ಟ್ವೀಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. COVID-19 ಗಾಗಿ ಸೆನೆಟರ್ ರಾಂಡ್ ಪಾಲ್ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಅವರು ಚೆನ್ನಾಗಿದ್ದಾರೆ ಮತ್ತು ಕ್ವಾರಂಟೈನ್ ಮಾಡಲಾಗಿದೆ. ವ್ಯಾಪಕ ಪ್ರಯಾಣ ಮತ್ತು ಘಟನೆಗಳಿಂದಾಗಿ ಸಾಕಷ್ಟು ಎಚ್ಚರಿಕೆಯಿಂದ ಪರೀಕ್ಷಿಸಲ್ಪಟ್ಟರು. ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಯಾವುದೇ ನೇರ ಸಂಪರ್ಕದ ಬಗ್ಗೆ ಅವರಿಗೆ ತಿಳಿದಿರಲಿಲ್ಲ.
ಅಮೆರಿಕದಲ್ಲಿ ಮಾರ್ಚ್ 22ರಂದೆ ಹೊಸದಾಗಿ 15 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 38,757ಕ್ಕೆ ಏರಿಕೆಯಾಗಿದೆ. ಇಂದು 98 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 400ಕ್ಕೆ ಏರಿದೆ.