ಜೂಮ್ ಕಾಲ್ ವೇಳೆ ಹ್ಯಾಕರ್ ನಿಂದ ಲೈಂಗಿಕ ಕಿರುಕುಳ ದೃಶ್ಯ: 60 ಮಕ್ಕಳಿಗೆ ಶಾಕ್!
ವಿದೇಶ
ಜೂಮ್ ಕಾಲ್ ವೇಳೆ ಹ್ಯಾಕರ್ ನಿಂದ ಲೈಂಗಿಕ ಕಿರುಕುಳ ದೃಶ್ಯ: 60 ಮಕ್ಕಳಿಗೆ ಶಾಕ್!
ವಿದ್ಯಾರ್ಥಿಗಳು ಜೂಮ್ ಆಪ್ ಮೂಲಕ ಫಿಟ್ನೆಸ್ ತರಗತಿಗಳಲ್ಲಿ ನಿರತರಾಗಿದ್ದಾಗ, ಜೂಮ್ ಬಾಂಬಿಂಗ್ ನಡೆದಿದ್ದು, 60 ಮಕ್ಕಳು ಬೆಚ್ಚಿಬಿದ್ದಿದ್ದಾರೆ.
ಲಂಡನ್: ವಿದ್ಯಾರ್ಥಿಗಳು ಜೂಮ್ ಆಪ್ ಮೂಲಕ ಫಿಟ್ನೆಸ್ ತರಗತಿಗಳಲ್ಲಿ ನಿರತರಾಗಿದ್ದಾಗ, ಜೂಮ್ ಬಾಂಬಿಂಗ್ ನಡೆದಿದ್ದು, 60 ಮಕ್ಕಳು ಬೆಚ್ಚಿಬಿದ್ದಿದ್ದಾರೆ.
ತರಗತಿಗಳು ನಡೆಯುತ್ತಿರುವಾಗಲೇ ಹ್ಯಾಕರ್ ಮಕ್ಕಳ ಲೈಂಗಿಕ ಕಿರುಕುಳದ ವಿಡಿಯೋವನ್ನು ಹಂಚಿದ್ದು ವಿದ್ಯಾರ್ಥಿಗಳು ಗಾಬರಿಯಾಗಿದ್ದಾರೆ.ಈ ಘಟನೆ ಸೌತ್ ವೆಸ್ಟ್ ಇಂಗ್ಲೆಂಡ್ ನಲ್ಲಿ ನಡೆದಿದೆ.
ಜೂಮ್ ಮೂಲಕ ತರಗತಿಗಳು, ಸಭೆಗಳು ನಡೆಯುತ್ತಿದ್ದಾಗ, ಅದರ ಮಧ್ಯದಲ್ಲಿ ಅನವಶ್ಯಕ, ಅಶ್ಲೀಲ ವಿಡಿಯೋಗಳನ್ನು ಹರಿಯಬಿಡುವ ಹ್ಯಾಕರ್ ಗಳ ಕುಕೃತ್ಯಕ್ಕೆ ಜೂಮ್ ಬಾಂಬಿಂಗ್ ಎಂದು ಹೇಳುತ್ತಾರೆ.
ಸ್ಥಳೀಯ ಪೊಲೀಸರ ಪ್ರಕಾರ ಹ್ಯಾಕರ್ ಇನ್ನಷ್ಟೇ ಪತ್ತೆಯಾಗಬೇಕಿದೆ. ಇದೇ ವೇಳೆ ಜೂಮ್ ಬಳಕೆದಾರರ ಸೆಕ್ಯುರಿಟಿ ಸೆಟಿಂಗ್ಸ್ ನ್ನು ಅರ್ಥ ಮಾಡಿಕೊಳ್ಳುವಂತೆ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ