ಲಸಿಕೆಯೇ ಇಲ್ಲದೆ ಕೊರೋನಾ ತೊಲಗಲಿದೆ: ಅಮೆರಿಕಾ ಅಧ್ಯಕ್ಷ ಟ್ರಂಪ್

ಮಾರಕ ಕೊರೋನಾವೈರಸ್ "ಲಸಿಕೆಯೇ ಇಲ್ಲದೆಯೂ ನಾಶವಾಗುತ್ತದೆ  ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಾರಕ ಕೊರೋನಾವೈರಸ್ "ಲಸಿಕೆಯೇ ಇಲ್ಲದೆಯೂ ನಾಶವಾಗುತ್ತದೆ  ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಿಪಬ್ಲಿಕನ್ ಶಾಸಕರೊಂದಿಗಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್ ಈ ಮೇಲಿನ ಹೇಳಿಕೆ ನೀಡಿದ್ದು ಇದೀಗ ಮೆರಿಕಾ ಅಧ್ಯಕ್ಷರ ಹೇಳಿಕೆ ತೀವ್ರ ವಾದ ವಿವಾದಕ್ಕೆ ಕಾರಣವಾಗಿದೆ. 

"ಈಗಾಗಲೇ ವೈರಸ್ ಹರಡುವಿಕೆ ತಗ್ಗುತ್ತಿದೆ. ಮುಂಬರುವ ದಿನದಲ್ಲಿ ಇನ್ನಷ್ಟು ಕಡಿಮೆಯಾಗಲಿದೆ.ಈ ಹಿಂದೆ ಸಹ ಅನೇಕ ವೈರಸ್ ಗಳು ಬಂದಿದ್ದವು. ಅವೌಗಳಿಗೆ ಲಸಿಕೆ ಕಂಡು ಹಿಡಿಯುವ ಮುನ್ನ ಅವು ಇಲ್ಲವಾಗಿದೆಈಗ ಬಂದಿರುವ ಕೋವಿಡ್-19  ಸಹ ಕೆಲ ದಿನಗಳ ನಂತರ ಇಲ್ಲವಾಗುತ್ತದೆ" ಟ್ರಂಪ್ ಹೇಳಿದ್ದಾರೆ.

ಇನ್ನು ಜಾಗತಿಕ ಮಹಾಮಾರಿಯಾಗಿರುವ ಕೊರೋನಾ  ತೊಲಗಿಸಲು ಪಣತೊಟ್ಟಿರುವ ಅಮೆರಿಕಾ ಹಾಗೂ ಚೀನಾ ರಾಷ್ಟ್ರಗಳು ಲಸಿಕೆ ಕಂಡುಹಿಡಿಯಲು ಸ್ಪರ್ಧೆಗಿಳಿದಂತೆ ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಕೊರೋನಾದಿಂದಾಗಿ ಅಮೆರಿಕಾದಲ್ಲಿ  95000ದಷ್ಟು ಮಂದಿ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ. 

ವೀಡಿಯೋ ಕೃಪೆ: ಗಾರ್ಡಿಯನ್ ನ್ಯೂಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com