ಭಾರತ ಮೂಲದ ಬಾಣಸಿಗನ ವಿವಾಹವಾಗಿದ್ದ ಆಸ್ಟ್ರಿಯಾ ರಾಜಕುಮಾರಿ ಮಾರಿಯಾ ಸಾವು

ಭಾರತೀಯ ಮೂಲದ ಬಾಣಸಿಗ ರಿಷಿ ರೂಪ್ ಸಿಂಗ್ ರನ್ನು ವಿವಾಹವಾಗಿದ್ದ ಆಸ್ಟ್ರಿಯಾದ ರಾಜಕುಮಾರಿ ಮಾರಿಯಾ ಗ್ಯಾಲಿಟ್ಜಿನ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜಕುಮಾರಿ ಮಾರಿಯಾ ಮತ್ತು ರಿಷಿ ರೂಪ್ ಸಿಂಗ್
ರಾಜಕುಮಾರಿ ಮಾರಿಯಾ ಮತ್ತು ರಿಷಿ ರೂಪ್ ಸಿಂಗ್

ನವದೆಹಲಿ: ಭಾರತೀಯ ಮೂಲದ ಬಾಣಸಿಗ ರಿಷಿ ರೂಪ್ ಸಿಂಗ್ ರನ್ನು ವಿವಾಹವಾಗಿದ್ದ ಆಸ್ಟ್ರಿಯಾದ ರಾಜಕುಮಾರಿ ಮಾರಿಯಾ ಗ್ಯಾಲಿಟ್ಜಿನ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಈ ಹಿಂದೆ ಭಾರತ ಮೂಲದ ಬಾಣಸಿಗ ರಿಷಿ ರೂಪ್ ಸಿಂಗ್ ರನ್ನು ವಿವಾಹವಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆಸ್ಟ್ರಿಯಾದ ರಾಜಕುಮಾರಿ ಮಾರಿಯಾ ಗ್ಯಾಲಿಟ್ಜಿನ್ ಅವರು ನಿನ್ನೆ ಹ್ಯೂಸ್ಟನ್‌ ನಲ್ಲಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಲುತ್ತಿದ್ದ ಮಾರಿಯಾ  ಗ್ಯಾಲಿಟ್ಜಿನ್ ಅವರು ತಮ್ಮ 31ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಹೂಸ್ಟನ್ ನಲ್ಲಿ ವಾಸವಾಗಿದ್ದ ಮಾರಿಯಾ ಸಿಂಗ್, ಪತಿ ಸಿಂಗ್ ಅವರೊಂದಿಗೆ ಏಪ್ರಿಲ್ 2017 ರಲ್ಲಿ ವಿವಾಹವಾಗಿದ್ದರು, ಅವರಿಗೆ ಎರಡು ವರ್ಷದ  ಮ್ಯಾಕ್ಸಿಮ್ ಮಗ ಕೂಡ ಇದ್ದಾನೆ ಎನ್ನಲಾಗಿದೆ. ಮಾರಿಯಾ ಹ್ಯೂಸ್ಟನ್ನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು, ಅಲ್ಲಿ ಸಿಂಗ್  ಬಾಣಸಿಗರಾಗಿದ್ದರು.  ರಾಜಕುಮಾರಿ ಮಾರಿಯಾ-ಅನ್ನಾ ಮತ್ತು ಪ್ರಿನ್ಸ್ ಪಿಯೋಟ್ರ್ ಗ್ಯಾಲಿಟ್ಜಿನ್ ಅವರ ಪುತ್ರಿ. ಪ್ರಸ್ತುತ ಮಾರಿಯಾ ಪಾರ್ಥೀವ ಶರೀರವನ್ನು ಹ್ಯೂಸ್ಟನ್‌ನ ಫಾರೆಸ್ಟ್ ಪಾರ್ಕ್ ವೆಸ್ಟ್ಹೈಮರ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ರಾಜಕುಮಾರಿಗೆ ಮೂವರು  ಸಹೋದರಿಯರಿದ್ದು, ಕ್ಸೆನಿಯಾ ಗ್ಯಾಲಿಟ್ಜಿನ್ ಡಿ ಮಟ್ಟಾ, ಟಟಿಯಾನಾ ಗ್ಯಾಲಿಟ್ಜಿನ್ ಸಿಯೆರಾ, ಮತ್ತು ರಾಜಕುಮಾರಿ ಅಲೆಕ್ಸಾಂಡ್ರಾ ಮತ್ತು ಅವಳ ಸಹೋದರರಾದ ರಾಜಕುಮಾರರಾದ ಡಿಮಿಟ್ರಿ ಮತ್ತು ಐಯಾನ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಅನ್ನಾ (ಜನನ ಆಸ್ಟ್ರಿಯಾದ ಆರ್ಚ್ಯೂಡೆಸ್) ಮತ್ತು ರಷ್ಯಾದ ಶ್ರೀಮಂತ ರಾಜಕುಮಾರ ಪಿಯೊಟ್ರ್ ಗ್ಯಾಲಿಟ್ಜಿನ್ ಅವರ ಪುತ್ರಿಯೇ ಈ ಮಾರಿಯಾ. ಮಾರಿಯಾ ತಾಯಿಯ ಅಜ್ಜ ಆಸ್ಟ್ರಿಯಾದ ಆರ್ಚ್‌ಡ್ಯೂಕ್ ರುಡಾಲ್ಫ್ ಎನ್ನಲಾಗಿದೆ. 1988 ರಲ್ಲಿ ಲಕ್ಸೆಂಬರ್ಗ್‌ನಲ್ಲಿ ಜನಿಸಿದ ಮಾರಿಯಾ 5 ನೇ  ವಯಸ್ಸಿನಲ್ಲಿ ರಷ್ಯಾಕ್ಕೆ ತೆರಳಿದ್ದರು. ಪದವಿ ಮುಗಿದ ನಂತರ, ಅವರು ಕಲೆ ಮತ್ತು ವಿನ್ಯಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬೆಲ್ಜಿಯಂಗೆ ತೆರಳಿದರು. ರಾಜಕುಮಾರಿ ಮಾರಿಯಾ ಬ್ರಸೆಲ್ಸ್‌ನಲ್ಲಿ ಹಾಗೂ ಚಿಕಾಗೊ, ಇಲಿನಾಯ್ಸ್ ಮತ್ತು ಹೂಸ್ಟನ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು  ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com