ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ವೈರಸ್ ನಡುವೆಯೇ ಗಗನಕ್ಕೇರಿದ ಪ್ರಧಾನಿ ಮೋದಿ ಜನಪ್ರಿಯತೆ: ನ್ಯೂಯಾರ್ಕ್ ಟೈಮ್ಸ್

ಮಾರಕ ಕೊರೋನಾ ವೈರಸ್ ಅಬ್ಬರದ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೂಡ ಗಗನಕ್ಕೇರುತ್ತಿದೆ ಎಂದು ಅಮೆರಿಕದ ಖ್ಯಾತ ಆಂಗ್ಲ ದೈನಿಕ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
Published on

ನ್ಯೂಯಾರ್ಕ್: ಮಾರಕ ಕೊರೋನಾ ವೈರಸ್ ಅಬ್ಬರದ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೂಡ ಗಗನಕ್ಕೇರುತ್ತಿದೆ ಎಂದು ಅಮೆರಿಕದ ಖ್ಯಾತ ಆಂಗ್ಲ ದೈನಿಕ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಮಾರಕ ಕೊರೋನಾ ವೈರಸ್ ನಿಂದಾಗಿ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದ್ದು, ಈ ಹೊತ್ತಿನಲ್ಲಿ ಸಂಕಷ್ಟದಿಂದ ಹೊರ ಬರಲು ವಿಶ್ವದ ಎಲ್ಲ ದೇಶಗಳೂ ಹರಸಾಹಸ ಪಡುತ್ತಿವೆ. ಈ ಪ್ರಕ್ರಿಯೆಯಲ್ಲಿ ಇತರೆ ದೇಶಗಳ ನಾಯಕರಿಗೆ ಹೋಲಿಕೆ ಮಾಡಿದರೆ ಭಾರತದ ಪ್ರಧಾನಿ ನರೇಂದ್ರ ಮೋದಿ  ಅವರ ಹೆಸರು ಹೆಚ್ಚು ಜನಪ್ರಿಯತೆ ಪಡೆದಿದೆ. ಕೊವಿಡ್-19 ಸಂಕಷ್ಟ ಕಾಲದಲ್ಲಿ ಒಂದಿಡೀ ದೇಶ ಓರ್ವ ವ್ಯಕ್ತಿಯನ್ನು ಹಿಂಬಾಲಿಸುತ್ತಿದೆ ಎಂದರೆ ಅದು ನರೇಂದ್ರ ಮೋದಿ ಮಾತ್ರ. ಕೊರೋನಾ ಕಾಲದಲ್ಲಿ ಪ್ರಧಾನಿ ಮೋದಿ ಹೆಸರು ಹೆಚ್ಚು ಖ್ಯಾತಿ ಗಳಿಸುತ್ತಿದ್ದು, ಒಂದು ವೇಳೆ ಭಾರತ  ಕೊರೋನಾ ಯುದ್ಧ ಗೆದ್ದರೆ ಪ್ರಧಾನಿ ಮೋದಿ ಹೆಸರು ಜನಪ್ರಿಯತೆಯ ಉತ್ತುಂಗಕ್ಕೆ ಏರಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಈ ಬಗ್ಗೆ ಸುಧೀರ್ಘ ಲೇಖನ ಪ್ರಕಟಿಸಿರುವ ಪತ್ರಿಕೆ, ಕಳೆದ ಎರಡು ತಿಂಗಳಲ್ಲಿ ಭಾರತದಲ್ಲಿ ಮೋದಿ ಮಾತು ಒಪ್ಪುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಈ ಪ್ರಮಾಣ ಶೇ.90ರಷ್ಟೂ ಕೂಡ ಇದೆ. ಇದೇ ಅವಧಿಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೋಲಿಕೆ ಮಾಡಿದರೆ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಹೇಳಿದೆ.

ಅಂತೆಯೇ ಲೇಖನದಲ್ಲಿ ಪುಲ್ವಾಮ ಉಗ್ರ ದಾಳಿ ಕುರಿತು ಉಲ್ಲೇಖಿಸಿರುವ ಪತ್ರಿಕೆ, ಪುಲ್ವಾಮ ದಾಳಿಗೆ ಪ್ರತಿಕಾರ ನೀಡಿದ ಬಳಿಕ ಮೋದಿ ಮತ್ತೆ ಅಧಿಕಾರಕ್ಕೇರಿದ್ದರು. ಇದೀಗ ಮತ್ತೆ ಕೊರೋನಾ ಕಾಲದಲ್ಲಿ ಮೋದಿ ಹೆಸರು ಚಾಲ್ತಿಯಲ್ಲಿದ್ದು, ಭಾರತ ಕೊರೋನಾ ಯುದ್ಧ ಗೆದ್ದರೆ ಮೋದಿ  ಇನ್ನಷ್ಟು ಬಲಿಷ್ಠರಾಗಿ ಹೊರಹೊಮ್ಮಲಿದ್ದಾರೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com