ಕೊರೋನಾ ಹುಟ್ಟಿಕೊಂಡ ಚೀನಾದಲ್ಲಿಯೇ ನಿಯಂತ್ರಣ ಔಷಧ ಸೃಷ್ಟಿ?

ಊರೆಲ್ಲಾ ಕೊಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ಅಕ್ಷರಶ: ಚೀನಾಕ್ಕೆ ಅನ್ವಯವಾಗಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವು, ನೋವಿಗೆ ಕಾರಣವಾದ ಮಾರಕ ಕೊರೋನಾವೈರಸ್ ಹುಟ್ಟಿಕೊಂಡ ಚೀನಾದಲ್ಲಿಯೇ ಅದಕ್ಕೆ ಅಂತ್ಯವಾಡುವ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. 
ಚೀನಾದ ಲ್ಯಾಬ್ ವೊಂದರ ಚಿತ್ರ
ಚೀನಾದ ಲ್ಯಾಬ್ ವೊಂದರ ಚಿತ್ರ
Updated on

ಬೀಜಿಂಗ್: ಊರೆಲ್ಲಾ ಕೊಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ಅಕ್ಷರಶ: ಚೀನಾಕ್ಕೆ ಅನ್ವಯವಾಗಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವು, ನೋವಿಗೆ ಕಾರಣವಾದ ಮಾರಕ ಕೊರೋನಾವೈರಸ್ ಹುಟ್ಟಿಕೊಂಡ ಚೀನಾದಲ್ಲಿಯೇ ಅದಕ್ಕೆ ಅಂತ್ಯವಾಡುವ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. 

ಚೀನಾದ ಪ್ರಯೋಗಾಲಯವೊಂದು ಔಷಧವೊಂದನ್ನು ಕಂಡುಹಿಡಿದಿದ್ದು,ಇದಕ್ಕೆ ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ತಡೆಯುವ ಸಾಮರ್ಥ್ಯವಿದೆ ಎಂದು ನಂಬಲಾಗಿದೆ.

ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೋನಾವೈರಸ್ ನಂತರ ಇಡೀ ಜಗತ್ತಿನಾದ್ಯಂತ ಹಬ್ಬಿದೆ.ಇದಕ್ಕೆ ಚಿಕಿತ್ಸೆ ಹಾಗೂ ಲಸಿಕೆ ಕಂಡುಹಿಡಿಯುವ  ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ಶುರುವಾಗಿದೆ.

ಚೀನಾದ ಪ್ರತಿಷ್ಠಿತ ಪೆಕಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಔಷಧವೊಂದನ್ನು ಕಂಡುಹಿಡಿದಿದ್ದು,ಇದರಿಂದ ಸೋಂಕಿತ ವ್ಯಕ್ತಿ ಬಹಳ ಬೇಗ ಗುಣಮುಖವಾಗವುದು  ಮಾತ್ರವಲ್ಲದೇ, ಬಹಳ ಬೇಗ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗಲಿದೆ  ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಾಣಿಗಳ ಮೇಲಿನ ಪ್ರಾಯೋಗಿಕ ಪರೀಕ್ಷೆ ಹಂತ ಯಶಸ್ವಿಯಾಗಿರುವುದಾಗಿ  ಬೀಜಿಂಗ್ ವಿಶ್ವವಿದ್ಯಾಲಯದ ಅಡ್ವಾನ್ಸ್ಡ್ ಇನ್ನೋವೇಶನ್ ಸೆಂಟರ್ ಆಫ್ ಜಿನೊಮಿಕ್ಸ್  ವಿಭಾಗದ ನಿರ್ದೇಶಕ ಸನ್ನಿ ಕ್ಸೀ- ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸೋಂಕಿತ ಇಲಿಗೆ ಔಷಧ ಪ್ರಯೋಗಿಸಿದ ಐದು ದಿನಗಳ ಬಳಿಕ 2500 ನಷ್ಟು ಸೋಂಕಿನ ಅಂಶವನ್ನು ಕಡಿಮೆ ಮಾಡಲಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದ ಕೋಶವನ್ನು ವೈರಸ್ ನಿಂದ ತಡೆಗಟ್ಟಲಿದೆ. ಅಂಟಿಬಾಡಿ ಸಂಶೋಧನೆಗಾಗಿ ಹಗಲು - ರಾತ್ರಿ ಕೆಲಸ ಮಾಡುತ್ತಿದ್ದೇವೆ. ಈ ವರ್ಷದ ಬಳಿಕ ಔಷಧ ಬಳಕೆಗೆ ಸಿದ್ಧವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕ್ಲಿನಿಕಲ್ ಪ್ರಯೋಗದ ಕಾರ್ಯಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಲ್ಲಿ ಇದನ್ನು ಮಾಡಲಾಗುತ್ತಿದೆ. ನಿಯಂತ್ರಕ ಅಂಟಿಬಾಡಿ ವಿಶೇಷವಾದ ಔಷಧವಾಗಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲಿದೆ ಎಂದು ಅವರು ಹೇಳಿದ್ದಾರೆ.

ಚೀನಾದ  ಐದು ಔಷಧಗಳನ್ನು ಈಗಾಗಲೇ ಮಾನವ ಪ್ರಯೋಗ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಕಳೆದ ವಾರ ತಿಳಿಸಿದ್ದರು. ಆದರೆ, ಲಸಿಕೆ ಅಭಿವೃದ್ಧಿ ಪಡಿಸಲು 12ರಿಂದ 18 ತಿಂಗಳು ಬೇಕಾಗಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com