ಜ್ಯೋತಿ-ಇವಾಂಕಾ ಟ್ರಂಪ್
ವಿದೇಶ
ಲಾಕ್ ಡೌನ್ ವೇಳೆ 1200 ಕಿ.ಮೀ ಸೈಕಲ್ ತುಳಿದು ಜ್ಯೋತಿ ಸಾಹಸ: ಇವಾಂಕಾ ಟ್ರಂಪ್ ಮೆಚ್ಚುಗೆ
ಗುರುಗ್ರಾಮದಲ್ಲಿ ಕೊರೋನಾ ಲಾಕ್ಡೌನ್ನಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಅನಾರೋಗ್ಯ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿಲೋಮೀಟರ್ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿಗೆ ಹತ್ತು ಹಲವು ಕಡೆಯಿಂದ ಅಭಿನಂದನೆಗಳ ಸುರಿಮಳೆಯಾಗಿದೆ.
ನವದೆಹಲಿ: ಗುರುಗ್ರಾಮದಲ್ಲಿ ಕೊರೋನಾ ಲಾಕ್ಡೌನ್ನಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಅನಾರೋಗ್ಯ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿಲೋಮೀಟರ್ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿಗೆ ಹತ್ತು ಹಲವು ಕಡೆಯಿಂದ ಅಭಿನಂದನೆಗಳ ಸುರಿಮಳೆಯಾಗಿದೆ.
ಹಲವರು ಆಕೆಯ ಸಾಹಸವನ್ನು ಹಲವರು ಮೆಚ್ಚಿ ಅಭಿನಂದನೆ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಜ್ಯೀತಿಯ ಸಾಧನೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7 ದಿನಗಳ ಕಾಲ ಬೈಸಿಕಲ್ ಮೇಲೆ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿ ಅವರ ಸಾಹಸ, ಧೈರ್ಯ, ಮೇಲಾಗಿ ತಂದೆ ಮೇಲಿನ ಪ್ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸಳೆದಿತ್ತು ಗಮನಿಸಿರುವ ಟ್ರಂಪ್ ಪುತ್ರಿ ಇವಾಂಕಾ ಈ ಕುರಿತು ಟ್ವೀಟ್ ಮಾಡಿ ಆಕೆಯ ಸಾಹಸ ಮತ್ತು ತಂದೆಯ ಮೇಲಿನ ಪ್ರೀತಿಯನ್ನು ಬಹಳ ಮುಕ್ತವಾಗಿ ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವಾಂಕಾ ಅವರ ಟ್ವೀಟ್ ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

