ಜನಾಂಗೀಯ ನಿಂದನೆ: ಅಪ್ರಾಪ್ತ ಬಾಲಕನ ಶಿಕ್ಷಣ ಮೊಟಕು, ಮೊಕದ್ದಮೆ ದಾಖಲು

ಅಮೆರಿಕದ ನ್ಯೂಜೆರ್ಸಿಯ ಸಿಖ್ ವಿದ್ಯಾರ್ಥಿಯೊಬ್ಬ ಜನಾಂಗೀಯ ನಿಂದನೆಗೆ ಒಳಗಾಗಿದ್ದಾನೆ ಮತ್ತು ದೀರ್ಘಕಾಲದ ಕಿರುಕುಳದಿಂದಾಗಿ ಶಾಲೆಯಿಂದ ಶಾಶ್ವತವಾಗಿ ಹೊರಗುಳಿಯಬೇಕಾಯಿತು ಎಂದು ಆರೋಪಿಸಿ ಶಿಕ್ಷಣ ಮಂಡಳಿಯ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಸಿಖ್ ಸಮುದಾಯ
ಸಿಖ್ ಸಮುದಾಯ

ನ್ಯೂಯಾರ್ಕ್: ಅಮೆರಿಕದ ನ್ಯೂಜೆರ್ಸಿಯ ಸಿಖ್ ವಿದ್ಯಾರ್ಥಿಯೊಬ್ಬ ಜನಾಂಗೀಯ ನಿಂದನೆಗೆ ಒಳಗಾಗಿದ್ದಾನೆ ಮತ್ತು ದೀರ್ಘಕಾಲದ ಕಿರುಕುಳದಿಂದಾಗಿ ಶಾಲೆಯಿಂದ ಶಾಶ್ವತವಾಗಿ ಹೊರಗುಳಿಯಬೇಕಾಯಿತು ಎಂದು ಆರೋಪಿಸಿ ಶಿಕ್ಷಣ ಮಂಡಳಿಯ ವಿರುದ್ಧ ಮೊಕದ್ದಮೆ ಹೂಡಲಾಗಿದೆ. 

ಸಿಖ್ ಒಕ್ಕೂಟವು ವಕೀಲ ಬ್ರಿಯಾನ್ ಎಂ ಸಿಜ್ ಅವರ ಮೂಲಕ ನ್ಯೂಜೆರ್ಸಿಯ ಸೆವೆಲ್‌ನಲ್ಲಿರುವ ಗ್ಲೌಸೆಸ್ಟರ್ ಕೌಂಟಿ ಶಾಲಾ ಜಿಲ್ಲಾ ಶಿಕ್ಷಣ ಮಂಡಳಿಯ ವಿರುದ್ಧ ದೂರು ನೀಡಿರುವುದಾಗಿ ಹೇಳಿದೆ. 

ಸಿಖ್ ವಿದ್ಯಾರ್ಥಿಯು ಅಪ್ರಾಪ್ತ ವಯಸ್ಕನಾಗಿರುವುದರಿಂದ ಅನಾಮಧೇಯನಾಗಿ ಉಳಿದಿರುವುದಾಗಿ ಗ್ಲೌಸೆಸ್ಟರ್ ಕೌಂಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿರುದ್ಧ ದಾಖಲಾದ ಪ್ರಕರಣವನ್ನು ದೂರಿನಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಯು 2018ರಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದಾನೆ. ಹೀಗಾಗಿ ನನ್ನ ಮಗು ಅನುಭವಿಸಿದ್ದನ್ನು ಯಾವುದೇ ವಿದ್ಯಾರ್ಥಿಯು ಅನುಭವಿಸಬಾರದು. ಸಹ ವಿದ್ಯಾರ್ಥಿಗಳನ್ನು ಹೆದರಿಸುವುದಕ್ಕಲ್ಲ. ಆದರೆ ಮುಂದೆ ಈ ರೀತಿ ನಡೆಯದಂತೆ ಮಾಡಲು ದೂರು ದಾಖಲಿಸಲಾಗಿದೆ ಎಂದು ವಿದ್ಯಾರ್ಥಿಯ ತಾಯಿ ಹೇಳಿದರು.

ಜನಾಂಗೀಯ ನಿಂದನೆ ಮಾಡುವವರನ್ನು ಸಿವಿಲ್ ನ್ಯಾಯಾಲಯವು ಗುರುತಿಸುತ್ತದೆ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತದೆ. ನನ್ನ ಮಗುವಿನ ಸಲುವಾಗಿ ಮತ್ತು ಈ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಲಿಕೆಯ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com