ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್

ಎರಡನೇ ಅಲೆ: ಪಾಸಿಟಿವ್ ಪ್ರಕರಣ ಹೆಚ್ಚಳ, ಬ್ರಿಟನ್ ನಲ್ಲಿ ಮತ್ತೊಮ್ಮೆ ಲಾಕ್ ಡೌನ್ !

 ಕೊರೋನಾ ಸೋಂಕಿನ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು  ಗಮನಾರ್ಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಿದೆ.

ಲಂಡನ್: ಕೊರೋನಾ ಸೋಂಕಿನ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು  ಗಮನಾರ್ಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಿದೆ.

ಗುರುವಾರದಿಂದ (ನವೆಂಬರ್ 5)  ಲಾಕ್‌ಡೌನ್ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.  ಆದರೆ, ದೇಶದ ಶಿಕ್ಷಣ ಸಂಸ್ಥೆಗಳಿಗೆ   ಲಾಕ್ ಡೌನ್  ನಿಂದ ವಿನಾಯಿತಿ  ಕಲ್ಪಿಸಿದೆ.  

ಕೊರೋನಾ ಪ್ರಕರಣಗಳು  ವೇಗವಾಗಿ ಹೆಚ್ಚಾಗುತ್ತಿರುವ  ಕಾರಣ  ಸೋಂಕು  ಪ್ರಸರಣ ತಡೆಯಲು  ಅನ್ಯ ಮಾರ್ಗವಿಲ್ಲದೆ ಲಾಕ್‌ಡೌನ್  ವಿಧಿಸುತ್ತಿರುವುದಾಗಿ ಎಂದು ಪ್ರಧಾನಿ  ಸಮರ್ಥಿಸಿಕೊಂಡಿದ್ದಾರೆ.

ಕೊರೋನಾ  ಮೊದಲ ಅಲೆಗಿಂತ  ಎರಡನೇ  ಅಲೆಯಲ್ಲಿ  ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವೈದ್ಯಕೀಯ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ  ಕೈಗೊಂಡಿದ್ದೇವೆ  ಎಂದು ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com