ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ಅಥವಾ ಬಿಡೆನ್? ಕಮಲಾ ಹ್ಯಾರಿಸ್ ಗೆದ್ದರೆ ಚೆನ್ನೈಯಲ್ಲಿ ವಿಜಯೋತ್ಸಾಹ?

ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿಜಕ್ಕೂ ಅಭೂತಪೂರ್ವವಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಚುನಾವಣಾ ದಿನಕ್ಕೂ ಮುಂಚಿತವಾಗಿ ಸುಮಾರು 100 ಮಿಲಿಯನ್ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್:  ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿಜಕ್ಕೂ ಅಭೂತಪೂರ್ವವಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಚುನಾವಣಾ ದಿನಕ್ಕೂ ಮುಂಚಿತವಾಗಿ ಸುಮಾರು 100 ಮಿಲಿಯನ್ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಡೊನಾಲ್ಡ್ ಟ್ರಂಪ್- ಹಿಲ್ಲರಿ ಕ್ಲಿಂಟನ್ ನಡುವಿನ ಚುನಾವಣೆಯಲ್ಲಿ ಒಟ್ಟಾರೇ, 138.8 ಮಿಲಿಯನ್ ಜನರು ಮತದಾನ ಮಾಡಿದ್ದರು.

ಚೆನ್ನೈ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿರುವ ಸುಮಾರು 1.9 ಮಿಲಿಯನ್ ಭಾರತೀಯ- ಅಮೆರಿಕನ್ ಜನರು ಹ್ಯಾರಿಸ್ ಗೆ ಮತ ನೀಡುವ ಸಾಧ್ಯತೆಯಿದೆ. ಪುರುಷರಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಗೆ ಮತ ಚಲಾಯಿಸುವ ನಿರೀಕ್ಷೆಯಿದೆ.

ಇವರಿಬ್ಬರ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ  ಡೊನಾಲ್ಡ್ ಟ್ರಂಪ್ (74) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ  ಮೈಕ್ ಪೆನ್ಸ್ (61) ಸ್ಪರ್ಧಿಸಿದ್ದಾರೆ. 239 ಮಿಲಿಯನ್ ಜನರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 538 ಎಲೆಕ್ಟೋರಾಲ್ ಮತಗಳಲ್ಲಿ 270 ಮ್ಯಾಜಿಕ್ ನಂಬರ್ ನ್ನು ಬಿಡೆನ್ ಹಾಗೂ ಟ್ರಂಪ್ ಪಡೆಯಬೇಕಾಗಿದೆ. ಫಲಿತಾಂಶ ಈ ಬಾರಿ ವಿಳಂಬವಾಗುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com