'ಚಿಲ್ ಡೊನಾಲ್ಡ್ ಚಿಲ್': 11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ಗೆ 'ಗ್ರೇಟಾ ಥನ್ಬರ್ಗ್' ತಿರುಗೇಟು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಖ್ಯಾತ ಪರಿಸರವಾದಿ ಹೋರಾಟಗಾರ್ತಿ 'ಗ್ರೇಟಾ ಥನ್ಬರ್ಗ್' ತಿರುಗೇಟು ನೀಡಿದ್ದಾರೆ.
ಗ್ರೇಟಾ ವರ್ಸಸ್ ಟ್ರಂಪ್
ಗ್ರೇಟಾ ವರ್ಸಸ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಖ್ಯಾತ ಪರಿಸರವಾದಿ ಹೋರಾಟಗಾರ್ತಿ 'ಗ್ರೇಟಾ ಥನ್ಬರ್ಗ್' ತಿರುಗೇಟು ನೀಡಿದ್ದಾರೆ.

ವರ್ಷದ ಹಿಂದೆ ಅಂದರೆ 2019ರ ಡಿಸೆಂಬರ್ ನಲ್ಲಿ ಟೈಮ್ಸ್ ಮ್ಯಾಗಜಿನ್ ನಲ್ಲಿ 19 ವರ್ಷದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ರ ಫೋಟೋ ಮುಖಪುಟದಲ್ಲಿ ಪ್ರಕಟವಾಗಿತ್ತು. ಅದೇ ಜಾಗದಲ್ಲಿ ತಮ್ಮ ಫೋಟೋ ನಿರೀಕ್ಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾಸ್ಯಾಸ್ಪದ. ಸ್ನೇಹಿತನೊಂದಿಗೆ ಹಳೆಯ  ಶೈಲಿಯ ಚಲನಚಿತ್ರಕ್ಕೆ ಹೋಗಿ ತನ್ನ ಕೋಪ ನಿರ್ವಹಣೆ ಸಮಸ್ಯೆಯ ಬಗ್ಗೆ ಗ್ರೇಟಾ ಕೆಲಸ ಮಾಡಬೇಕು, ಚಿಲ್ ಗ್ರೆಟಾ ಚಿಲ್ ಎಂದು ಟ್ವೀಟ್ ಮಾಡಿದ್ದರು.

ಇದೀಗ ಅದೇ ಹಳೆಯ ಟ್ವೀಟ್ ಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ತಿರುಗೇಟು ನೀಡಿರುವ ಗ್ರೇಟಾ,,, ಟ್ರಂಪ್ ಅವರ ಮತ ಎಣಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಎಂಬ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ. 'ಹಾಸ್ಯಾಸ್ಪದ. ಸ್ನೇಹಿತನೊಂದಿಗೆ ಹಳೆಯ ಶೈಲಿಯ ಚಲನಚಿತ್ರಕ್ಕೆ ಹೋಗಿ ತನ್ನ ಕೋಪ ನಿರ್ವಹಣೆ  ಸಮಸ್ಯೆಯ ಬಗ್ಗೆ ಡೊನಾಲ್ಡ್ ಕೆಲಸ ಮಾಡಬೇಕು, ಚಿಲ್ ಡೊನಾಲ್ಡ್ ಚಿಲ್.. ಎಂದು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಟ್ರಂಪ್ ಸುಪ್ರೀಂ ಕೋರ್ಟ್ ಮೊರೆ ಹೋಗುವ ಮಾತನಾಡುತ್ತಿದ್ದು, ತಮ್ಮ ಪ್ರತಿ ಸ್ಪರ್ಧಿ ಜೋ ಬೈಡನ್ ಸರಳ ಬಹಮತದತ್ತ ದಾಪುಗಾಲಿರಿಸಿದ್ದಾರೆ.

ಇನ್ನು ಗ್ರೇಟಾ ಈ ಚುನಾವಣೆಯಲ್ಲಿ ಜೊ ಬೈಡನ್ ಬಣದ ಪರ ಮತ ಚಲಾಯಿಸುವಂತೆ ಟ್ವಿಟರ್ ನಲ್ಲಿ ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com