70 ರ ವೃದ್ಧೆಯಲ್ಲಿ 105 ದಿನಗಳ ಕಾಲ ಕೋವಿಡ್ ವೈರಾಣು ಜೀವಂತ; ಆದರೂ ರೋಗಲಕ್ಷಣ ರಹಿತ!

ಕೊರೋನಾ ವೈರಸ್ ರೊಗಲಕ್ಷಣ ರಹಿತವಾಗಿ 70 ವರ್ಷದ ವೃದ್ಧೆಯಲ್ಲಿ 105 ದಿನಗಳ ಕಾಲ ಸಕ್ರಿಯವಾಗಿದ್ದ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. 
ಕೊರೋನಾ ವೈರಾಣು
ಕೊರೋನಾ ವೈರಾಣು

ವಾಷಿಂಗ್ ಟನ್: ಕೊರೋನಾ ವೈರಸ್ ರೊಗಲಕ್ಷಣ ರಹಿತವಾಗಿ 70 ವರ್ಷದ ವೃದ್ಧೆಯಲ್ಲಿ 105 ದಿನಗಳ ಕಾಲ ಸಕ್ರಿಯವಾಗಿದ್ದ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. 

ಬ್ಲಡ್ ಕ್ಯಾನ್ಸರ್ ನ್ನು ಎದುರಿಸುತ್ತಿರುವ ಅಮೆರಿಕದ ವೃದ್ಧೆಯಲ್ಲಿ ಈ ವೈರಾಣು ರೋಗಲಕ್ಷಣ ರಹಿತವಾಗಿ ಬಹು ದೀರ್ಘಾವಧಿ ಇದ್ದದ್ದು ಅಧ್ಯಯನ ವರದಿಯಿಂದ ಬಹಿರಂಗಗೊಂಡಿದೆ.

ಕೊರೋನ ವೈರಾಣು 8 ದಿನಗಳವರೆಗೆ ರೋಗ ಹರಡುತ್ತಿದ್ದದ್ದು ಬಹುತೇಕ ಪ್ರಕರಣಗಳಲ್ಲಿ ಕಂಡುಬಂದಿತ್ತು. ಜರ್ನಲ್ ಸೆಲ್ ನಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟಗೊಂಡಿದ್ದು, ಎಷ್ಟು ದಿನಗಳ ಕಾಲ ಕೊರೋನಾ ವೈರಾಣು ಓರ್ವ ರೋಗಿಯಲ್ಲಿ ಸಕ್ರಿಯವಾಗಿರುತ್ತದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಲಾಗಿದ್ದು ಹೊಸ ಮಾಹಿತಿಗಳನ್ನೂ ಒಳಗೊಂಡಿದೆ.

ಅಧ್ಯಯನವನ್ನು ಪ್ರಾರಂಭಿಸಿದಾಗ ವೈರಾಣು ಸಕ್ರಿಯವಾಗಿರುವ ಕಾಲದ ಬಗ್ಗೆ ತಿಳಿದಿರಲಿಲ್ಲ ಎಂದು ಅಧ್ಯಯನ ತಂಡದ ಹಿರಿಯರಾದ ವಿನ್ಸೆಂಟ್ ಮನ್ಸ್ಟರ್ ತಿಳಿಸಿದ್ದಾರೆ.

ವಾಷಿಂಗ್ ಟನ್ ನಲ್ಲಿ 70 ರ ವೃದ್ಧೆ ಸೋಂಕು ಹರಡುತ್ತಿದ್ದ ಪ್ರಾರಂಭದ ದಿನಗಳಲ್ಲಿ ಸೋಂಕಿಗೆ ಗುರಿಯಾಗಿದ್ದರು, ಆದರೆ ಯಾವುದೇ ರೋಗಲಕ್ಷಣಗಳಿರಲಿಲ್ಲ. 105 ದಿನಗಳ ಕಾಲ ಸತತ ಪರೀಕ್ಷೆ ನಡೆಸಿದರೂ ಸಹ ಅವರಲ್ಲಿ ಸೋಂಕು ಸಕ್ರಿಯವಾಗಿದ್ದದ್ದು ಕಂಡುವಂದಿದೆ. ಬ್ಲಡ್ ಕ್ಯಾನ್ಸರ್ ಇದ್ದ ಕಾರಣ ಅವರಿಗೆ ವೈರಾಣು ಇದ್ದರೂ ಸಹ ಇಮ್ಯುನೋಕಾಂಪ್ರೊಮೈಸ್ ಆಗಿದ್ದರು. ಆದ್ದರಿಂದ ರೋಗಲಕ್ಷಣಗಳು ಕಂಡುಬಂದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com