ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಅಮೆರಿಕಾ ಮಾಜಿ ಅಧ್ಯಕ್ಷ ಪಡೆಯುವ ಪಿಂಚಣಿ ಎಷ್ಟು ಗೊತ್ತೆ?

ಅಮೆರಿಕದ ಮಾಜಿ ಅಧ್ಯಕ್ಷರುಗಳು ದೇಶಕ್ಕೆ  ಸೇವೆ ಸಲ್ಲಿಸಲು  ಸರ್ಕಾರ ಅವರಿಗೆ ಕೆಲವೊಂದು    ಸೌಲಭ್ಯಗಳನ್ನು  ಒದಗಿಸುತ್ತಿದೆ.

ವಾಷಿಂಗ್ಟನ್:  ವಿಶ್ವದ ‘ದೊಡ್ಡಣ್ಣ’ ಅಮೆರಿಕಾದ  ಅಧ್ಯಕ್ಷರು ಯಾರು ಎಂಬ ಸಸ್ಪೆನ್ಸ್  ಕೊನೆಗೊಂಡಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್  ವಿಜಯ ಸಾಧಿಸಿ, ರಿಪಬ್ಲಿಕನ್  ಪಕ್ಷದ ಅಭ್ಯರ್ಥಿ,  ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪರಾಭವಗೊಳಿಸಿದ್ದಾರೆ. ಅಮೆರಿಕಾ ಈವರೆಗೆ 45  ಮಂದಿ ಅಧ್ಯಕ್ಷರನ್ನು ಕಂಡಿದೆ. 

ಆದರೆ,  ಅವರ ಅಧಿಕಾರಾವಧಿ ಮುಗಿದ ನಂತರ ಅವರು ಏನು ಮಾಡುತ್ತಾರೆ? ಅವರು ಹೇಗೆ ಬದುಕುತ್ತಾರೆ ಎಂದು  ಯಾರೂ ಅಷ್ಟಾಗಿ  ತಲೆ ಕಡೆಸಿಕೊಳ್ಳುವುದಿಲ್ಲ. ಮಾಜಿ ಅಧ್ಯಕ್ಷರುಗಳು ದೇಶಕ್ಕೆ  ಸೇವೆ ಸಲ್ಲಿಸಲು  ಸರ್ಕಾರ ಅವರಿಗೆ ಕೆಲವೊಂದು    ಸೌಲಭ್ಯಗಳನ್ನು  ಒದಗಿಸುತ್ತಿದೆ.

ಆರಂಭದಲ್ಲಿ ಮಾಜಿ ಅಧ್ಯಕ್ಷರಿಗೆ ಯಾವುದೇ  ಸೌಲಭ್ಯಗಳಿರಲಿಲ್ಲ. ಆದರೆ,  1912 ರಲ್ಲಿ, ಆಂಡ್ರ್ಯೂ ಕಾರ್ನೆಗಿ ಎಂಬ  ಉದ್ಯಮಿ   ಮಾಜಿ  ಅಧ್ಯಕ್ಷರುಗಳಿಗೆ   ಆರ್ಥಿಕ  ಸಹಾಯ  ಕಲ್ಪಿಸಲು  ಆರಂಭಿಸಿದರು.ಅದರ ನಂತರ ಅದು ಸಂಪ್ರದಾಯದಂತೆ  ನಡೆದುಕೊಂಡು ಬಂದಿದೆ. ಆ  ಕಾಲದಲ್ಲಿ  ಅವರು ವರ್ಷಕ್ಕೆ  25,000  ಡಾಲರ್  ಪಿಂಚಣಿ   ನೀಡುವುದಾಗಿ  ಅವರು  ಪ್ರಕಟಿಸಿದ್ದರು. ನಂತರ ಸರ್ಕಾರ 1958 ರಲ್ಲಿ  “ಫಾರ್ಮರ್  ಪ್ರೆಸಿಡೆಂಟ್  ಅ್ಯಕ್ಟ್”  ಜಾರಿಗೆ ತಂದಿತು. ಆ ಕಾನೂನಿನ ಪ್ರಕಾರ, ಮಾಜಿ ಅಧ್ಯಕ್ಷರಿಗೆ ಪಿಂಚಣಿ, ಸಿಬ್ಬಂದಿ ವೇತನ, ಆರೋಗ್ಯ ವಿಮೆಯೊಂದಿಗೆ,  ರಹಸ್ಯ ಭದ್ರತೆ  ಒದಗಿಸುತ್ತದೆ.

ಅಮೆರಿಕಾ  ಮಾಜಿ ಅಧ್ಯಕ್ಷರಿಗೆ ಖಜಾನೆಯ ಕಾರ್ಯದರ್ಶಿ ಪಿಂಚಣಿ  ಮಂಜೂರು ಮಾಡುತ್ತಾರೆ. ಪ್ರಸ್ತುತ ವರ್ಷಕ್ಕೆ 2,19,200 ಡಾಲರ್‌ ಅಥವಾ ಸುಮಾರು 1.6 ಕೋಟಿ ರೂ. ಪಿಂಚಣಿ  ನೀಡುತ್ತಿದೆ.ಆದರೂ, ಪ್ರತಿ ವರ್ಷ ಪಿಂಚಣಿ ಮೊತ್ತವನ್ನು ಪರಿಷ್ಕರಿಸುತ್ತದೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೂಡಲೇ ಪಿಂಚಣಿ ಪಾವತಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಮಾಜಿ ಅಧ್ಯಕ್ಷರ ಪತ್ನಿಗೂ ವಾರ್ಷಿಕ  20,000 ಡಾಲರ್  ಪಿಂಚಣಿ  ನೀಡುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com