ನಾನಿರುವ ಜೈಲಿನ ಬಾತ್ ರೂಂನಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು: ಮರಿಯಮ್ ನವಾಜ್

ನನ್ನನ್ನು ಇಟ್ಟಿದ್ದ ಜೈಲಿನ ಬಾತ್ ರೂ ಹಾಗೂ ಸ್ನಾನದ ಕೊಠಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರಿಯಮ್  ನವಾಜ್ ಹೇಳಿದ್ದಾರೆ.
ಮರಿಯಮ್ ನವಾಜ್
ಮರಿಯಮ್ ನವಾಜ್

ನವದೆಹಲಿ: ನನ್ನನ್ನು ಇಟ್ಟಿದ್ದ ಜೈಲಿನ ಬಾತ್ ರೂ ಹಾಗೂ ಸ್ನಾನದ ಕೊಠಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರಿಯಮ್  ನವಾಜ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮರಿಯಮ್ ಅವರು, ಕಳೆದ ವರ್ಷ ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಜೈಲಿನಲ್ಲಿದ್ದಾಗ ಎದುರಾಗಿದ್ದ ಅನಾನುಕೂಲತೆಗಳ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಂತೆ ಜಿಯೋ ನ್ಯೂಸ್ ವರದಿ ಮಾಡಿದ್ದು, 'ನಾನು ಎರಡು  ಬಾರಿ ಜೈಲಿಗೆ ಹೋಗಿದ್ದೇನೆ, ಒಬ್ಬ ಮಹಿಳೆಯಾಗಿ ನನ್ನನ್ನು ಜೈಲಿನಲ್ಲಿ ಹೇಗೆ ನೋಡಿಕೊಳ್ಳಲಾಯಿತು ಎನ್ನುವುದರ ಬಗ್ಗೆ ಮಾತನಾಡಿದರೆ ಅವರಿಗೆ ಅವರು ತಮ್ಮ ಮುಖ ತೋರಿಸಲು ಕೂಡ ಧೈರ್ಯವಿರುವುದಿಲ್ಲ ಎಂದು  ಅವರು ಅಲ್ಲಿನ ಸರ್ಕಾರವನ್ನು ಉಲ್ಲೇಖಿಸಿ ಹೇಳಿದರು.

ಇದೇ ವೇಳೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಟೀಕಿಸಿದ ಮರಿಯಮ್, ಅಧಿಕಾರಿಗಳು ಕೋಣೆಗೆ ನುಗ್ಗಿ ಆಕೆಯ ತಂದೆ ನವಾಜ್ ಷರೀಫ್ ಎದುರೇ ನನನ್ನು ಬಂಧಿಸಿ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ಸಾಧ್ಯವಾಗಿದೆ ಎಂದರೆ,  ಪಾಕಿಸ್ತಾನದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಪ್ರಸ್ತುತ ಪಿಟಿಐ ಸರ್ಕಾರವನ್ನು ಅಧಿಕಾರದಿಂದ ತೆಗೆದು ಹಾಕಲು ಸಂವಿಧಾನದ ವ್ಯಾಪ್ತಿಯಲ್ಲಿ ಮಿಲಿಟರಿ ಸ್ಥಾಪನೆಯೊಂದಿಗೆ ಮಾತುಕತೆ ನಡೆಸಲು ತಮ್ಮ ಪಕ್ಷ ಮುಕ್ತವಾಗಿದೆ ಎಂದೂ  ಮರಿಯನ್ ಘೋಷಣೆ ಮಾಡಿದ್ದಾರೆ. 

ನಾನು ರಾಜ್ಯ ಸಂಸ್ಥೆಗಳಿಗೆ ವಿರೋಧಿಯಲ್ಲ ಆದರೆ ರಹಸ್ಯವಾಗಿ ಯಾವುದೇ ಸಂವಾದ ನಡೆಯುವುದಿಲ್ಲ. ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿಯ (ಪಿಡಿಎಂ) ವೇದಿಕೆಯ ಮೂಲಕ ಸಂವಾದದ ಕಲ್ಪನೆಯನ್ನು ಚರ್ಚಿಸಬಹುದು ಎಂದು ಹೇಳಿದರು.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪಿಎಂಎಲ್-ಎನ್ ನಾಯಕಿ ಮರಿಯಮ್ ರನ್ನು ಕಳೆದ ವರ್ಷ ಬಂಧಿಸಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com