ವಾಷಿಂಗ್ಟನ್: 28 ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಜಾರ್ಜಿಯಾ ಕ್ಷೇತ್ರದಲ್ಲಿ ನಿಯೋಜಿತ ಅಮೆರಿಕಾ ಅಧ್ಯಕ್ಷ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ನ.3ರಂದು ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆತ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕೆಲ ಕಾರಣಗಳಿಂದಾಗಿ ಕೆಲವು ಕ್ಷೇತ್ರಗಳಲ್ಲಿ ಮತಗಳ ಮರುಎಣಿಕೆ ಕಾರ್ಯ ನಡೆಯುತ್ತಿದೆ.
ಇದರಂತೆ ಜಾರ್ಜಿಯಾ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳು ಮತಗಳನ್ನು ಮರುಎಣಿಕೆ ಮಾಡಿದ್ದು. ಇದರಲ್ಲಿ ಜೋ ಬೈಡನ್ ಅವರು ವಿಜೇತರಾಗಿದ್ದಾರೆಂದು ಘೋಷಣೆ ಮಾಡಿದ್ದಾರೆ.
50 ಲಕ್ಷ ಮತಗಳನ್ನು ಮರುಎಣಿಕೆ ಮಾಡಿದ ಬಳಿಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ವಿರುದ್ಧ 12,284 ಮತಗಳ ಅಂತರದಿಂದ ವಿಜೇತರಾಗಿರುವುದಾಗಿ ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ. ಈ ಮೊದಲು ಅವರು ಬೈಡನ್ 14000 ಮತಗಳಿಂದ ಜಯಗಳಿಸಿದ್ದರು. 1992 ರಲ್ಲಿ ಅಭ್ಯರ್ಥಿ ಬಿಲ್ ಕ್ಲಿಂಟನ್ ಜಯಗಳಿಸಿದ ನಂತರ, ಈ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾರೂ ಗೆಲುವು ಸಾಧಿಸಿರಲಿಲ್ಲ.
Advertisement