ಹಿಂದೂಗಳ ವಿರುದ್ಧ ದಾಳಿಗೆ ಸಂಚು ರೂಪಿಸಿ, ಕಾಶ್ಮೀರದಲ್ಲಿ ಹೋರಾಡಲು ಪ್ಲಾನ್ ಮಾಡಿದ್ದ ಬಾಂಗ್ಲಾ ಪ್ರಜೆಯ ಬಂಧನ

 ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದಾಳಿಗೆ ಸಂಚು ರೂಪಿಸಿ, ಕಾಶ್ಮೀರದಲ್ಲಿ ಹೋರಾಡಲು ಯೋಜಿಸಿದ್ದ ಆ ದೇಶದ ಪ್ರಜೆಯೊಬ್ಬನನ್ನು  ಭದ್ರತಾ ಪಡೆಗಳು ಮಂಗಳವಾರ ಬಂಧಿಸಿರುವುದಾಗಿ ಸಿಂಗಾಪುರ ಹೇಳಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸಿಂಗಾಪುರ: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದಾಳಿಗೆ ಸಂಚು ರೂಪಿಸಿ, ಕಾಶ್ಮೀರದಲ್ಲಿ ಹೋರಾಡಲು ಯೋಜಿಸಿದ್ದ ಆ ದೇಶದ ಪ್ರಜೆಯೊಬ್ಬನನ್ನು  ಭದ್ರತಾ ಪಡೆಗಳು ಮಂಗಳವಾರ ಬಂಧಿಸಿರುವುದಾಗಿ ಸಿಂಗಾಪುರ ಹೇಳಿದೆ. 

ಯುರೋಪಿನಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಯ ನಂತರ ನಗರ-ರಾಜ್ಯದಲ್ಲಿ ಹೆಚ್ಚಿದ ಭದ್ರತಾ ಕ್ರಮಗಳ ಭಾಗವಾಗಿ 37 ಜನರ ಅನುಮಾನಾಸ್ಪದ ಚಟುವಟಿಕೆಗಳನ್ನು ತನಿಖೆ ನಡೆಸಿದ ನಂತರ ಇದು ತಿಳಿದುಬಂದಿದೆ.

ಸಿಂಗಾಪುರದಲ್ಲಿ 37 ಜನರ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ನಡೆಸಲಾಗಿದ್ದು, ಅವರಲ್ಲಿ ಬಹುತೇಕ ಮಂದಿ ಇತ್ತೀಚಿಗೆ ಫ್ರಾನ್ಸ್ ನಲ್ಲಿ ನಡೆದ  ಉಗ್ರ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ  ಹಿಂಸಾಚಾರಕ್ಕೆ ಪ್ರಚೋದನೆ ಅಥವಾ ಸಮುದಾಯದಲ್ಲಿ ಅಶಾಂತಿಯನ್ನು ಉಂಟು ಮಾಡುವ ಸಂದೇಶಗಳನ್ನು ಫೋಸ್ಟ್ ಮಾಡಿದ್ದರು ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

37 ಜನರ ಪೈಕಿಯಲ್ಲಿ 14 ಮಂದಿ ಸಿಂಗಾಪುರದವರು ಹಾಗೂ 23 ಮಂದಿ ವಿದೇಶಿ ಬಾಂಗ್ಲಾದೇಶವರಾಗಿದ್ದಾರೆ. ಸಿಂಗಾಪುರದಲ್ಲಿನ  14  ಜನರಲ್ಲಿ 10 ಪುರುಷರು ಮತ್ತು ನಾಲ್ವರು ಮಹಿಳೆಯರಿದ್ದು, ಎಲ್ಲಾರೂ 19ರಿಂದ 62 ವರ್ಷದೊಳಗಿನವರಾಗಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಇತ್ತೀಚಿಗೆ ನಡೆದ ಫ್ರಾನ್ಸ್ ಉಗ್ರ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವುದಾಗಿ ಮಾಹಿತಿ ನೀಡಿದೆ.

ಇವರಲ್ಲಿ ಬಾಂಗ್ಲಾದೇಶದ 26 ವರ್ಷದ ಅಹ್ಮದ್ ಫೈಸಲ್ ಎಂಬ ಯುವಕನನ್ನು ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದ್ದು, ಆತನನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದಾಳಿಗೆ ಬಳಸಲಾಗುತಿತ್ತು. ಇಸ್ಲಾಂ ವಿರೋಧಿಗಳ ವಿರುದ್ಧ ಹೋರಾಡಲು ಕಾಶ್ಮೀರಕ್ಕೆ ತೆರಳಲು ಸಿದ್ಧನಾಗಿದ್ದಾಗಿ ಆತ ಹೇಳಿರುವುದಾಗಿ ಸಚಿವಾಲಯ ತಿಳಿಸಿದೆ. 

ಸಿಂಗಪುರದಲ್ಲಿ 2017ರ ಆರಂಭದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಫೈಸಲ್ 2018ರಲ್ಲಿ ಐಸಿಸ್ ಆನ್ ಲೈನ್ ಪ್ರಚಾರದಿಂದ ಧರ್ಮಾಂದನಾಗಿ ಬದಲಾಗಿದ್ದ. ನವೆಂಬರ್ 2 ರಂದು ಆತನನ್ನು ಬಂಧಿಸಲಾಗಿತ್ತು.  ಸಿರಿಯಾದಲ್ಲಿ ಇಸ್ಲಾಮಿಕ್ ಕ್ಯಾಲಿಫೇಟ್ ಸ್ಥಾಪಿಸುವ ಐಸಿಸ್ ಗುರಿಯತ್ತ ಆಕರ್ಷಿತನಾಗಿದ್ದ ಫೈಸಲ್, ಸಿರಿಯ ಸರ್ಕಾರದ ವಿರುದ್ಧ ಹೋರಾಡಲು ಅಲ್ಲಿಗೆ ಪ್ರಯಾಣಿಸಲು ಬಯಸಿದ್ದ. ಅದೇ ರೀತಿ ಹೋರಾಡಿ ಸತ್ತರೆ ಹುತಾತ್ಮರಾಗುತ್ತಾರೆ ಎಂಬುದರಲ್ಲಿ ಆತ ನಂಬಿಕೆ ಹೊಂದಿದ್ದ ಎಂದು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com