ರಾಕೆಟ್ ದಾಳಿ
ರಾಕೆಟ್ ದಾಳಿ

ಅಜರ್ ಬೈಜಾನ್‍ ನ ಗಂಜಾ ಪಟ್ಟಣದ ಮೇಲೆ ರಾಕೆಟ್ ದಾಳಿ: ಕಟ್ಟಡ ನಾಶ, ಐವರು ಸಾವು

ಅಜರ್ ಬೈಜಾನ್‍ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್‍ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ  ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ. 
Published on

ಬಕು: ಅಜರ್ ಬೈಜಾನ್‍ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್‍ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ  ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ. 

ಗಂಜಾ ನಗರವನ್ನು ಗುರಿಯಾಗಿಸಿಕೊಂಡು ಅರ್ಮೇನಿಯಾ ಪ್ರದೇಶದಿಂದ ಶೆಲ್ ದಾಳಿ ನಡೆಸಲಾಗಿದೆ ಎಂದು  ಅಜರ್ ಬೈಜಾನ್‍ ರಕ್ಷಣಾ ಸಚಿವಾಲಯ ಭಾನುವಾರ ಮುಂಜಾನೆ ತಿಳಿಸಿದೆ. 

‘ರಾಕೆಟ್ ದಾಳಿಯಿಂದ ಬೆಂಕಿ ಹೊತ್ತಿಕೊಂಡು ವಸತಿ ಕಟ್ಟಡ ಸಂಪೂರ್ಣವಾಗಿ ನಾಶವಾಗಿದೆ. ಮೃತಪಟ್ಟ ಐವರ ಮೃತದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆಯಲಾಗಿದೆ. ಅಲ್ಲದೆ, 17 ಮಂದಿ ಗಾಯಗೊಂಡಿದ್ದಾರೆ.

 ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ಅಜರ್ ಬೈಜಾನ್‍ನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com