ಫ್ರಾನ್ಸ್: ಚರ್ಚ್ ಬಳಿ ಆಗಂತುಕನಿಂದ ಚೂರಿ ಇರಿತ; ಮಹಿಳೆಯ ಶಿರಚ್ಛೇದ, 3 ಸಾವು, ಭಯೋತ್ಪಾದನೆ ಶಂಕೆ!

ಪ್ರವಾದಿ ಮೊಹಮ್ಮದ್ ಪೈಗಂಬರ್ ರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. 
ಪೊಲೀಸರು
ಪೊಲೀಸರು

ಪ್ಯಾರಿಸ್: ಪ್ರವಾದಿ ಮೊಹಮ್ಮದ್ ಪೈಗಂಬರ್ ರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. 

ಅಲ್ಲದೆ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರು ಪ್ರವಾದಿ ಮೊಹಮ್ಮದ್ ರ ವ್ಯಂಗ್ಯಚಿತ್ರ ಪ್ರದರ್ಶನ ನಿಲ್ಲಿಸುವುದಿಲ್ಲ(will not give up cartoons) ಎಂದು ದೇಶದ ಮುಂದೆ ಪ್ರತಿಜ್ಞೆ ಮಾಡಿದ್ದರು. 

ಇದರ ಬೆನ್ನಲ್ಲೇ ಇದೀಗ ಮೆಡಿಟರೇನಿಯನ್ ಸಿಟಿ ಬಳಿಯ ಚರ್ಚ್ ಬಳಿ ಆಗಂತುಕನೊಬ್ಬ ಚೂರಿಯಿಂದ ಹಲವರ ಮೇಲೆ ದಾಳಿ ನಡೆಸಿದ್ದಾನೆ. ಮಹಿಳೆಯ ಶಿರಚ್ಛೇಧ ಮಾಡಿದ್ದಾನೆ. ಇನ್ನಿಬ್ಬರು ಚೂರಿ ಇರಿತದಿಂದ ಮೃತಪಟ್ಟಿದ್ದಾರೆ. ದಾಳಿಯ ಕುರಿತಂತೆ ಫ್ರೆಂಚ್ ಭಯೋತ್ಪಾದನೆ ವಿರೋಧಿ ಅಭಿಯೋಜಕರರು ತನಿಖೆ ಕೈಗೊಂಡಿದ್ದಾರೆ. 

ನೊಟ್ರೆ ಡೇಮ್ ಚರ್ಚ್‌ ಬಳಿ ಗುರುವಾರ ಬೆಳಿಗ್ಗೆ ನಡೆದ ದಾಳಿಯ ನಂತರ ಹಲ್ಲೆಕೋರನನ್ನು ಬಂಧಿಸಲಾಗಿದೆ. ಬಂಧನದ ವೇಳೆ ಹಲ್ಲೆಕೋರ ಗಾಯಗೊಂಡಿದ್ದರಿಂದ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಬಂಧ ಭಯೋತ್ಪಾದನೆಯ ನಂಟಿನ ಕುರಿತಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ವಾಕ್ ಸ್ವಾತಂತ್ರ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಭೋದನೆ ಮಾಡುತ್ತಿದ್ದರು. ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಚಿತ್ರದ ಬಗ್ಗೆ ಚರ್ಚೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಯುವಕನೋರ್ವ ಶಿಕ್ಷಕನ ಕತ್ತು ಕತ್ತರಿಸಿ ಕೊಂದು ಹಾಕಿದ್ದ. ನಂತರ ಪೊಲೀಸರು ಹಂತಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com