ಚೀನಾದಿಂದ ಮರುಬಳಕೆ ಬಾಹ್ಯಾಕಾಶ ನೌಕೆ ಯಶಸ್ವಿ ಉಡಾವಣೆ: ಗೌಪ್ಯವಾಗಿರಿಸಿದ ಯೋಜನೆ ವಿವರ!
ಬೀಜಿಂಗ್: ಮರುಬಳಕೆ ಮಾಡಬಹುದಾದ ಪ್ರಾಯೋಗಿಕ ಬಾಹ್ಯಾಕಾಶ ನೌಕೆಯನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಈ ಯೋಜನೆ ವಿವರಗಳನ್ನು ಗೌಪ್ಯವಾಗಿರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ -2 ಎಫ್ ಕ್ಯಾರಿಯರ್ ರಾಕೆಟ್‌ನಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಸಿನ್ಹುವಾ ವರದಿ ಮಾಡಿದೆ.
ಕಕ್ಷೆಯ ಕಾರ್ಯಾಚರಣೆ ಮುಗಿಸಿದ ಬಾಹ್ಯಾಕಾಶ ನೌಕೆ ಪೂರ್ವನಿರ್ಧರಿತ ಲ್ಯಾಂಡಿಂಗ್ ಪ್ರದೇಶಕ್ಕೆ ಹಿಂತಿರುಗುತ್ತದೆ. ಇದು ತನ್ನ ಹಾರಾಟದ ಸಮಯದಲ್ಲಿ ಮರುಬಳಕೆ ಮಾಡಬಹುದಾದ ತಂತ್ರಜ್ಞಾನಗಳನ್ನು ಪರೀಕ್ಷಿಸಲಿದೆ.
ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಬಾಹ್ಯಾಕಾಶ ಯಾನವನ್ನು ರಹಸ್ಯವಾಗಿಡಲಾಗಿದೆ ಎಂದು ವರದಿ ಮಾಡಿದೆ.
ಚೀನಾದ ಮಿಲಿಟರಿ ಮೂಲವೊಂದು "ಈ ಉಡಾವಣೆಯಲ್ಲಿ ಹಲವು ಪ್ರಥಮಗಳಿವೆ. ಬಾಹ್ಯಾಕಾಶ ನೌಕೆ ಹೊಸದು, ಉಡಾವಣಾ ವಿಧಾನವು ವಿಭಿನ್ನವಾಗಿದೆ. ಅದಕ್ಕಾಗಿಯೇ ಹೆಚ್ಚುವರಿ ಭದ್ರತೆ ಇದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಯೋಜನೆ ವಿವರಗಳ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದ್ದಾರೆ. ಆದರೆ "ಬಹುಶಃ ನೀವು ಇದಕ್ಕೆ ಸಮನಾಗಿ ಯುಎಸ್ ಎಕ್ಸ್ -37ಬಿ ಅನ್ನು ನೋಡಬಹುದು ಎಂದು ಸಲಹೆ ನೀಡಿದರು.
ಎಕ್ಸ್ -37ಬಿ ಮಾನವರಹಿತ ಬಾಹ್ಯಾಕಾಶ ನೌಕೆಯಾಗಿದ್ದು, ಇದು ಬಾಹ್ಯಾಕಾಶ ನೌಕೆಯ ಸಣ್ಣ ಆವೃತ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ರಾಕೆಟ್‌ನಿಂದ ಉಡಾವಣೆಯಾಗುತ್ತದೆ ಮತ್ತು ರನ್‌ವೇ ಲ್ಯಾಂಡಿಂಗ್‌ಗಾಗಿ ಭೂಮಿಗೆ ಮರಳುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ