ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಎರಡು ಬಾರಿ ಮತ ಹಾಕಬಹುದು ಎಂದು ಹೇಳಿ ವಿವಾದ ಮೈ ಮೇಲೆ ಎಳೆದುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಮುಂಬರುವ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇ ಮೇಲ್ ಮತ್ತು ಬೂತ್ ಗೆ ಖುದ್ದಾಗಿ ಹೋಗಿ ಎರಡು ಬಾರಿ ಮತ ಚಲಾಯಿಸಬಹುದು ಎಂದು ಉತ್ತರ ಕ್ಯಾರೊಲಿನಾ ರಾಜ್ಯದಲ್ಲಿ ಹೇಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
Published on

ವಾಷಿಂಗ್ಟನ್: ಮುಂಬರುವ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇ ಮೇಲ್ ಮತ್ತು ಬೂತ್ ಗೆ ಖುದ್ದಾಗಿ ಹೋಗಿ ಎರಡು ಬಾರಿ ಮತ ಚಲಾಯಿಸಬಹುದು ಎಂದು ಉತ್ತರ ಕ್ಯಾರೊಲಿನಾ ರಾಜ್ಯದಲ್ಲಿ ಹೇಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಉತ್ತರ ಕ್ಯಾರೊಲಿನಾದ ಲಿಲ್ಮಿಂಗ್ಟನ್ ನಲ್ಲಿ ಮೊನ್ನೆ ಬುಧವಾರ ಪ್ರವಾಸ ನಡೆಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ಅವರ ಬಳಿ ಸುದ್ದಿವಾಹಿನಿಯ ವರದಿಗಾರರೊಬ್ಬರು, ತಮಗೆ ಇ ಮೇಲ್ ಮೂಲಕ ಮತ ಹಾಕುವ ವ್ಯವಸ್ಥೆಯಲ್ಲಿ ವಿಶ್ವಾಸವಿದೆಯೇ ಎಂದು ಕೇಳಿದರು.

ನಾಗರಿಕರು ಇಮೇಲ್ ನಲ್ಲಿ ಮತ ಹಾಕಿ ನಂತರ ತಾವು ಹಾಕಿರುವ ಮತವನ್ನು ಪರೀಕ್ಷೆ ಮಾಡಲು ಬೂತ್ ಗೆ ಖುದ್ದಾಗಿ ಹೋಗಿ ನೋಡಬಹುದು. ಇಮೇಲ್ ನಲ್ಲಿ ಹಾಕಿರುವ ಮತ ಸ್ವೀಕೃತವಾದರೆ ಬೂತ್ ನಲ್ಲಿ ಮತ್ತೊಮ್ಮೆ ಹಾಕಲು ಸಾಧ್ಯವಾಗುವುದಿಲ್ಲ, ಹೀಗಾಗಿ ಮೇಲೆ ಮಾಡಿ ನಂತರ ಮತಗಟ್ಟೆಗೆ ಕೂಡ ಹೋಗಬಹುದು ಎಂದು ಟ್ರಂಪ್ ಹೇಳಿದ್ದರು.

ಆದರೆ ಇದು ತಮಗೆ ಚುನಾವಣೆಯಲ್ಲಿ ಮತ ಸಿಗಲು ಕಾನೂನನ್ನು ಉಲ್ಲಂಘಿಸಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನತೆಗೆ ಹೇಳಿಕೊಡುತ್ತಿದ್ದಾರೆ ಎಂದು ಉತ್ತರ ಕ್ಯಾರೊಲಿನಾ ಅಟೊರ್ನಿ ಜನರಲ್ ಡೆಮಾಕ್ರಟ್ ಪಕ್ಷದ ಜೋಶ್ ಸ್ಟೈನ್ ಹೇಳಿದ್ದಾರೆ.
ಉತ್ತರ ಕ್ಯಾರೊಲಿನಾ ರಾಜ್ಯದ ಕಾನೂನು ಪ್ರಕಾರ ಎರಡೆರಡು ಬಾರಿ ಮತ ಹಾಕುವುದು ಕಾನೂನು ಪ್ರಕಾರ ತಪ್ಪಾಗುತ್ತದೆ. ಬ್ಯಾಲಟ್ ನಲ್ಲಿ ಒಬ್ಬ ವ್ಯಕ್ತಿ ಮತ ಚಲಾಯಿಸಿದರೆ ನಂತರ ಅದನ್ನು ಬದಲಿಸಲು ಆಗುವುದಿಲ್ಲ. ಇಮೇಲ್ ಮೂಲಕ ಹಾಕುವುದೇ ಅಥವಾ ಮತಗಟ್ಟೆಗೆ ಹೋಗಿ ಹಾಕುವುದೇ ಎಂದು ಜನರೇ ತೀರ್ಮಾನಿಸಬೇಕು ಎಂದು ಅವರು ಹೇಳುತ್ತಾರೆ.

ಇಮೇಲ್ ಮತ ಚಲಾಯಿಸುವಿಕೆಯಲ್ಲಿ ವಂಚನೆ ನಡೆಯುವ ಸಾಧ್ಯತೆಯಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಅಟೊರ್ನಿ ಜನರಲ್ ವಿಲ್ಲಿಯಮ್ ಬರ್ರ್ ಟೀಕಿಸಿದ್ದಾರೆ.

ಈ ಬಾರಿ ಕೊರೋನಾ ವೈರಸ್ ನಿಂದಾಗಿ ಅಮೆರಿಕನ್ನರಲ್ಲಿ ಬಹುತೇಕರು ಮೇಲ್ ಮೂಲಕ ಮತ ಹಾಕುವ ಸಾಧ್ಯತೆಯಿದೆ.
ಅಮೆರಿಕ ಶ್ವೇತಭವನ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯನ್ನು ಬೆಂಬಲಿಸಿದೆ. ಚುನಾವಣಾ ಪ್ರಕ್ರಿಯೆ ಮುಕ್ತ, ನ್ಯಾಯಸಮ್ಮತವಾಗಬೇಕೆಂದು ಅಧ್ಯಕ್ಷರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡು ವಾಸ್ತವಕ್ಕೆ ದೂರವಾಗಿ ಪ್ರಚಾರ ಮಾಡುತ್ತಿವೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com