ಅಮೆರಿಕಾವಷ್ಟೇ ಅಲ್ಲ ಜರ್ಮನಿಯಿಂದಲೂ ಚೀನಾಗೆ ಮರ್ಮಾಘತ!

ಜಾಗತಿಕ ಮಟ್ಟದಲ್ಲಿ ಚೀನಾಗೆ ಸಂಕಷ್ಟದ ದಿನಗಳು ಪ್ರಾರಂಭವಾದಂತಿದೆ. 
ಜರ್ಮನಿ ಚಾನ್ಸಿಲರ್ ಏಂಜೆಲಾ ಮಾರ್ಕೆಲ್
ಜರ್ಮನಿ ಚಾನ್ಸಿಲರ್ ಏಂಜೆಲಾ ಮಾರ್ಕೆಲ್

ಬರ್ಲಿನ್: ಜಾಗತಿಕ ಮಟ್ಟದಲ್ಲಿ ಚೀನಾಗೆ ಸಂಕಷ್ಟದ ದಿನಗಳು ಪ್ರಾರಂಭವಾದಂತಿದೆ. 

ಒಂದೆಡೆ ಗಡಿ ಪ್ರದೇಶದಲ್ಲಿ ತನ್ನ ನೆರೆ ರಾಷ್ಟ್ರಗಳನ್ನು ಕೆಣಕಿ ಕೆಂಗಣ್ಣಿಗೆ ಗುರಿಯಾಗಿದ್ದರೆ ಮತ್ತೊಂದೆಡೆ ಜಾಗತಿಕ ಮಟ್ಟದಲ್ಲಿ ಚೀನಾದ ವಿಶ್ವಾಸಾರ್ಹತೆಗಳ ಬಗ್ಗೆಯೇ ಪ್ರಶ್ನೆಗಳು ಉದ್ಭವವಾಗುತ್ತಿದೆ. ಈ ವರೆಗೂ ಅಮೆರಿಕ ಮಾತ್ರ ಚೀನಾ ವಿರುದ್ಧ ಗುಡುಗುತ್ತಿತ್ತು. ಈಗ ಜರ್ಮನಿ ಸಹ ಚೀನಾಗೆ ಭರ್ಜರಿ ಹೊಡೆತ ನೀಡಿದ್ದು, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ "ಪ್ರಜಾಪ್ರಭುತ್ವ" ಮೌಲ್ಯವುಳ್ಳ ದೇಶಗಳೊಂದಿಗೆ ಹೆಚ್ಚಿನ ಗಮನ ಕೇಂದ್ರೀಕರಿಸಲು ತೀರ್ಮಾನಿಸಿದೆ. 

ಯುರೋಪ್ ನಲ್ಲಿ ಚೀನಾದ ಮಾನವ ಹಕ್ಕುಗಳ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಆರ್ಥಿಕ ಅವಲಂಬನೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. 

ನಿಯಮಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರದ ಆಧಾರದಲ್ಲಿ ಮುಂದಿನ ಜಾಗತಿಕ ಕ್ರಮಗಳನ್ನು ರೂಪುಗೊಳಿಸುವುದನ್ನು ನಾವು ಬಯಸುತ್ತೆವೆ ಬದಲಾಗಿ ಕಠಿಣ ನಿಯಮಗಳಿಂದಲ್ಲ ಎಂದು ಜರ್ಮನಿಯ ವಿದೇಶಾಂಗ ಸಚಿವ ಹೇಳಿದ್ದಾರೆ. ಆದ್ದರಿಂದಲೇ ನಾವು ಪ್ರಜಾಪ್ರಭುತ್ವ ಹಾಗೂ ಉದಾರ ಮೌಲ್ಯಗಳನ್ನು ಹೊಂದಿರುವ ರಾಷ್ಟ್ರಗಳ ಜೊತೆಗೆ ಸಹಕಾರವನ್ನು ಬಯಸುತ್ತೇವೆ ಎಂದು ಹೇಳುವ ಮೂಲಕ ಚೀನಾದಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ್ದಾರೆ. 

ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಜರ್ಮನಿಯ ಶೇ.50 ರಷ್ಟು ವ್ಯಾಪಾರ ಚೀನಾದಲ್ಲಿದ್ದು, ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಚೀನಾದ ಸರ್ಕಾರ ಜರ್ಮನಿ ಸಂಸ್ಥೆಗಳಿಗೆ ಒತ್ತಡ ಹೇರುತ್ತಿದೆ. ಇವುಗಳನ್ನು ನಿಭಾಯಿಸುವುದಕ್ಕಾಗಿ ಚೀನಾದೊಂದಿಗೆ ಯುರೋಪಿಯನ್ ಯೂನಿಯನ್ ಮಾತುಕತೆ ನಡೆಸುತ್ತಿದೆ. ಈ ಕಾರಣದಿಂದಾಗಿ ಜರ್ಮನಿಗೆ ಚೀನಾದ ಮೇಲಿನ ಅವಲಂಬನೆಯ ಆತಂಕ ಮೂಡಿಸಿದ್ದು ಚೀನಾದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com