ಟಿಕ್ ಟಾಕ್ ಟಿ ಶರ್ಟ್ ಧರಿಸಿ ಅಮೆರಿಕ ಪ್ರಜೆಯೊಬ್ಬನಿಂದ ಬೆಂಬಲ
ಟಿಕ್ ಟಾಕ್ ಟಿ ಶರ್ಟ್ ಧರಿಸಿ ಅಮೆರಿಕ ಪ್ರಜೆಯೊಬ್ಬನಿಂದ ಬೆಂಬಲ

ಅಮೆರಿಕಾದಲ್ಲಿ ಟಿಕ್ ಟಾಕ್ ಆಪ್ ಬಿಡ್ಡಿಂಗ್ ಒರಾಕಲ್ ಪಾಲು, ಮೈಕ್ರೊಸಾಫ್ಟ್ ತಿರಸ್ಕೃತ 

ಅಮೆರಿಕದ ತಂತ್ರಜ್ಞಾನ ಸಹಭಾಗಿತ್ವವಾಗಿ ಮೈಕ್ರೊಸಾಫ್ಟ್ ಬದಲು ಒರಾಕಲ್ ನ್ನು ಟಿಕ್ ಟಾಕ್ ಆಪ್ ಮಾಲೀಕರು ಆಯ್ಕೆ ಮಾಡಿಕೊಂಡಿದ್ದು ಇದರಿಂದ ಅಮೆರಿಕಾದಲ್ಲಿ ಟಿಕ್ ಟಾಕ್ ವಿಡಿಯೊ ಶೇರಿಂಗ್ ಆಪ್ ನಡೆಸಲು ಸಹಾಯವಾಗಲಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.

ವಾಷಿಂಗ್ಟನ್: ಅಮೆರಿಕದ ತಂತ್ರಜ್ಞಾನ ಸಹಭಾಗಿತ್ವವಾಗಿ ಮೈಕ್ರೊಸಾಫ್ಟ್ ಬದಲು ಒರಾಕಲ್ ನ್ನು ಟಿಕ್ ಟಾಕ್ ಆಪ್ ಮಾಲೀಕರು ಆಯ್ಕೆ ಮಾಡಿಕೊಂಡಿದ್ದು ಇದರಿಂದ ಅಮೆರಿಕಾದಲ್ಲಿ ಟಿಕ್ ಟಾಕ್ ವಿಡಿಯೊ ಶೇರಿಂಗ್ ಆಪ್ ನಡೆಸಲು ಸಹಾಯವಾಗಲಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.

ಅಮೆರಿಕಾದಲ್ಲಿ ಟಿಕ್ ಟಾಕ್ ಆಪ್ ನ್ನು ಖರೀದಿಸುವ ತಮ್ಮ ಬಿಡ್ಡಿಂಗ್ ತಿರಸ್ಕೃತಗೊಂಡಿದೆ. ಚೀನಾ ಮೂಲದ ಟಿಕ್ ಟಾಕ್ ಆಪ್ ನ್ನು ಗೂಢಚಾರ ಆತಂಕ ಹಿನ್ನೆಲೆಯಲ್ಲಿ ದೇಶದಲ್ಲಿ ಸೆಪ್ಟೆಂಬರ್ 20ರ ಹೊತ್ತಿಗೆ ನಿಷೇಧ ಹೇರುವ ಬಗ್ಗೆ ಆದೇಶ ಹೊರಡಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಈ ಬಗ್ಗೆ ಟಿಕ್ ಟಾಕ್ ಮತ್ತು ಅಮೆರಿಕ ಶ್ವೇತಭವನ ಯಾವುದೇ ಪ್ರತಿಕ್ರಿಯೆ ಇದುವರೆಗೆ ನೀಡಿಲ್ಲ. ಒರಾಕಲ್ ಕಡೆಯಿಂದ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಟಿಕ್ ಟಾಕ್ ನ್ನು ಖರೀದಿಸುವ ಬಗ್ಗೆ ವಾಲ್ ಮಾರ್ಟ್ ಕಂಪೆನಿ ಈ ಹಿಂದೆ ಮೈಕ್ರೊಸಾಫ್ಟ್ ಜೊತೆ ಸಹಭಾಗಿತ್ವವನ್ನು ಬಯಸಿತ್ತು. ಬೈಟ್ ಡ್ಯಾನ್ಸ್ ಮತ್ತು ಇತರ ಆಪ್ ಕಂಪೆನಿಗಳ ಜೊತೆ ಕೂಡ ಮಾತುಕತೆ ನಡೆಸುತ್ತಿದೆ. 

ದೇಶದ ಭದ್ರತೆಗೆ ಟಿಕ್ ಟಾಕ್ ಆಪ್ ನಿಂದ ಧಕ್ಕೆಯುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ಡೊನಾಲ್ಡ್ ಟ್ರಂಪ್ ಅದನ್ನು ನಿಷೇಧಿಸುವುದಾಗಿ ಮತ್ತು ಬೈಟ್ ಡ್ಯಾನ್ಸ್ ನ್ನು ಮಾರಾಟ ಮಾಡಬೇಕೆಂದು ಹೇಳಿದ್ದರು. ಆದರೆ ಟಿಕ್ ಟಾಕ್ ಆಪ್ ಕಂಪೆನಿ ಈ ಆರೋಪವನ್ನು ತಳ್ಳಿಹಾಕಿತ್ತು.

Related Stories

No stories found.

Advertisement

X
Kannada Prabha
www.kannadaprabha.com