ಜಪಾನ್‌ ಆಡಳಿತ ಪಕ್ಷದ ನಾಯಕತ್ವ ಗೆದ್ದ ಸೂಗಾ; ಶೀಘ್ರದಲ್ಲೇ ಪ್ರಧಾನಿಯಾಗಿ ಘೋಷಣೆ

ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೇ ಸೂಗಾ ಆಡಳಿತಾರೂಢ ಲಿಬರಲ್‌ ಡೆಮಾಕ್ರೆಟಕ್‌ ಪಾರ್ಟಿಯ ನಾಯಕತ್ವದ ಮತದಾನದಲ್ಲಿ ಜಯಗಳಿಸಿದ್ದು, ಈಗ ಪ್ರಧಾನಮಂತ್ರಿಯ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಯೋಶಿಹಿದೇ ಸೂಗಾ
ಯೋಶಿಹಿದೇ ಸೂಗಾ

ಟೋಕಿಯೋ: ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೇ ಸೂಗಾ ಆಡಳಿತಾರೂಢ ಲಿಬರಲ್‌ ಡೆಮಾಕ್ರೆಟಕ್‌ ಪಾರ್ಟಿಯ ನಾಯಕತ್ವದ ಮತದಾನದಲ್ಲಿ ಜಯಗಳಿಸಿದ್ದು, ಈಗ ಪ್ರಧಾನಮಂತ್ರಿಯ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಸೂಗಾ 377 ಮತಗಳನ್ನು ಗಳಿಸಿದರು. ಇವರ ಎದುರಾಳಿಯಾಗಿದ್ದ ಮಾಜಿ ವಿದೇಶಾಂಗ ಸಚಿವ ಫೂಮಿಯೋ ಕಿಸಿದಾ ಕೇವಲ 89 ಹಾಗೂ ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ 68 ಮತಗಳನ್ನು ಗಳಿಸಿದರು.

ಬುಧವಾರ ಜಪಾನ್‌ ಸಂಸತ್ತು ಸೂಗಾ ಅವರನ್ನು ಸರ್ಕಾರದ ಮುಖ್ಯಸ್ಥನಾಗಿ ಘೋಷಿಸಲಿದೆ. ಇವರು ದೀರ್ಘಕಾಲ ಸೇವೆ ಸಲ್ಲಿಸಿ ಅನಾರೋಗ್ಯದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಿರುವಮಾಜಿ ಪ್ರಧಾನಿ ಶಿಂಜೋ ಅಬೆ ಸ್ಥಾನಕ್ಕೆ ನೇಮಕಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com