ಒಂದೆಡೆ ಜೋ ಬಿಡೆನ್ ವಿರುದ್ಧ ಟ್ರಂಪ್ ಡ್ರಗ್ಸ್ ಆರೋಪ, ಮತ್ತೊಂದೆಡೆ ಭಾರತೀಯ ಮತ ಬ್ಯಾಂಕ್‌ನಲ್ಲಿ ಬಿಡೆನ್ ಮುಂದು!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ  ಅಭ್ಯರ್ಥಿ, ಹಾಲಿ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರ ತೀವ್ರಗೊಳಿಸಿದ್ದಾರೆ.
ಜೋ ಬಿಡೆನ್-ಟ್ರಂಪ್
ಜೋ ಬಿಡೆನ್-ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ  ಅಭ್ಯರ್ಥಿ, ಹಾಲಿ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರ ತೀವ್ರಗೊಳಿಸಿದ್ದಾರೆ.

ಇದರ ಭಾಗವಾಗಿ ಅವರು ತಮ್ಮ ಎದುರಾಳಿಯ ವಿರುದ್ದ ಗಂಭೀರ ಆರೋಪ ಮಾಡುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ನಿಷೇಧಿತ ಮಾದಕ ಪದಾರ್ಥ ಸೇವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ಈವರೆಗೆ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ, ಜೋ ಬಿಡೆನ್ ಅವರ ಸ್ವಭಾವ ಅತ್ಯಂತ ಭಯಾನಕವಾಗಿದ್ದು, ಅವರೊಬ್ಬ ಅಸಮರ್ಥ ಎಂದು ಆರೋಪಿಸಿದ್ದಾರೆ.

ತಮ್ಮ ಭಾಷಣಗಳು ಜನರ ಮೇಲೆ ಪ್ರಭಾವಯುತಗೊಳಿಸಲು ಹಾಗೂ ಚಟುವಟಿಕೆಯಿಂದಿರಲು ಅವರು ಡ್ರಗ್ಸ್ ಬಳಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಟ್ರಂಪ್,  ಬಿಡೆನ್ ಅವರ ವರ್ತನೆ ವಿಚಿತ್ರವೆಂದು ಗೋಚರಿಸುತ್ತಿದೆ ಹಾಗಾಗಿ ಮೊದಲ ಚುನಾವಣಾ ಭಾಷಣಕ್ಕೆ ಮುನ್ನ ಸೆಪ್ಟಂಬರ್ 29ರೊಳಗೆ ಬಿಡೆನ್ ಡ್ರಗ್ ಪರೀಕ್ಷೆಗೆ ಒಳಗಾಗಬೇಕೆಂದು ಅವರು ಒತ್ತಾಯಿಸಿದ್ದಾರೆ. 74 ವರ್ಷದ ಟ್ರಂಪ್, ತಾವು  ಕೂಡಾ ಈ  ಪರೀಕ್ಷೆಗಳಿಗೆ ಒಳಗಾಗಲು ಸಿದ್ಧ ಎಂದು ಘೋಷಿಸಿದ್ದಾರೆ.

ಇದೇ ವೇಳೆ ಟ್ರಂಪ್ ಭಾರತೀಯರನ್ನು ಸೆಳೆಯಲು ಏನೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ. ಆದರೂ ಭಾರತೀಯರ ಒಮ್ಮತ ಮಾತ್ರ ಬಿಡೆನ್ ಪರ ಇದೆ ಎಂದು ಸರ್ವೆ ಮೂಲಕ ತಿಳಿದುಬಂದಿದೆ. 

ಎಎಪಿಐ ನಡೆಸಿದ ಸರ್ವೆಯಲ್ಲಿ 66ರಷ್ಟು ಭಾರತೀಯ ಅಮೆರಿಕನ್ನರು ಜೋ ಬಿಡೆನ್ ಪರ ಒಲವು ಹೊಂದಿದ್ದಾರೆ. ಇನ್ನು ಶೇಖಡ 28ರಷ್ಟು ಮಂದಿ ಮಾತ್ರ ಟ್ರಂಪ್ ಪರ ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com