ಯುಎಸ್ ಆರ್ಥಿಕತೆ ಪುನರುಜ್ಜೀವನ ತಂಡಕ್ಕೆ ಸುಂದರ ಪಿಚ್ಚೈ, ಸತ್ಯನಾದೆಳ್ಲ ಸೇರಿ 4 ಭಾರತೀಯ ಅಮೆರಿಕರನ್ನು ನೇಮಿಸಿದ ಟ್ರಂಪ್

ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ತಲ್ಲಣಗೊಂಡಿದೆ. ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ಸಹ ಇದಕ್ಕೆ ಹೊರತಾಗಿಲ್ಲ. ಅಮೆರಿಕದ ಆರ್ಥಿಕತೆ ಪುನರುಜ್ಜೀವನಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ಪಡೆಯಲು ತಂಡವೊಂದನ್ನು ರಚಿಸಿದ್ದಾರೆ. 
ಯುಎಸ್ ಆರ್ಥಿಕತೆ ಪುನರುಜ್ಜೀವನ ತಂಡಕ್ಕೆ ಸುಂದರ ಪಿಚ್ಚೈ, ಸತ್ಯನಾದೆಳ್ಲ ಸೇರಿ 4 ಭಾರತೀಯ ಅಮೆರಿಕರ ನೇಮಕ
ಯುಎಸ್ ಆರ್ಥಿಕತೆ ಪುನರುಜ್ಜೀವನ ತಂಡಕ್ಕೆ ಸುಂದರ ಪಿಚ್ಚೈ, ಸತ್ಯನಾದೆಳ್ಲ ಸೇರಿ 4 ಭಾರತೀಯ ಅಮೆರಿಕರ ನೇಮಕ

ನ್ಯೂಯಾರ್ಕ್: ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ತಲ್ಲಣಗೊಂಡಿದೆ. ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ಸಹ ಇದಕ್ಕೆ ಹೊರತಾಗಿಲ್ಲ. ಅಮೆರಿಕದ ಆರ್ಥಿಕತೆ ಪುನರುಜ್ಜೀವನಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ಪಡೆಯಲು ತಂಡವೊಂದನ್ನು ರಚಿಸಿದ್ದಾರೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಂಡದಲ್ಲಿ, ಗೂಗಲ್ ನ ಸುಂದರ್ ಪಿಚ್ಚೈ, ಮೈಕ್ರೋಸಾಫ್ಟ್ ನ ಸತ್ಯ ನಾದೆಳ್ಲ ಸೇರಿದಂತೆ ಕಾರ್ಪೊರೇಟ್ ವಲಯದಲ್ಲಿ ಮುಂಚೂಣಿಯಲ್ಲಿರುವ 6 ಭಾರತೀಯ-ಅಮೆರಿಕನ್ನರನ್ನು ನೇಮಕ ಮಾಡಿ, ಕೊರೋನಾದಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಸುಧಾರಿಸುವಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡುವಂತೆ ಸೂಚಿಸಿದ್ದಾರೆ. 

ಕೊರೋನಾ ವೈರಸ್ ನ ಪರಿಣಾಮ ಅಮೆರಿಕಾದಲ್ಲಿ ಈಗ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ 16 ಮಿಲಿಯನ್ ಜನರ ಉದ್ಯೋಗಕ್ಕೆ ಕುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ವಿವಿಧ ಕ್ಷೇತ್ರಗಳ 200 ನಾಯಕರನ್ನು ಯುಎಸ್ ಆರ್ಥಿಕತೆ ಪುನರುಜ್ಜೀವನ ತಂಡಕ್ಕೆ ನೇಮಕ ಮಾಡಿದ್ದು, ವಿವಿಧ ವಿಷಯಗಳತ್ತ ಈ ತಂಡ ಗಮನ ಹರಿಸಿ ಅಧ್ಯಕ್ಷರಿಗೆ ವರದಿ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com