ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು: ವಿಶ್ವ ಆರೋಗ್ಯ ಸಂಸ್ಥೆ

ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ. 
ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು: ವಿಶ್ವ ಆರೋಗ್ಯ ಸಂಸ್ಥೆ
ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು: ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ: ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ. 

ಕೊರೋನಾ ವೈರಸ್ ನ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂಶೋಧಕರು ನೀಡಿರುವ ಸಲಹೆಯನ್ನಾಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ಈ ಮಾರ್ಗಸೂಚಿಯನ್ನು ಕಳಿಸಿದೆ. ವೈರಾಣುವಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಂತೆಲ್ಲಾ ಈ ಮಾರ್ಗಸೂಚಿಗಳು ಬದಲಾವಣೆಯಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ. 

ಕೊರೋನಾ ವೈರಸ್ ಸೋಂಕು ತಗುಲಿದರೆ ಅದು ಮರುಕಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ  ಕಾರಣ ಕೊರೋನಾ ವೈರಸ್ ನಿಂದ ಗುಣಮುಖರಾದವರಿಗೆ ಯಾವುದೇ ಕಾರಣಕ್ಕೂ ಇಮ್ಯುನಿಟಿ ಪಾಸ್ಪೋರ್ಟ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಅಪಾಯಕಾರಿ ಎಂದು ಎಲ್ಲಾ ದೇಶದ ಸರ್ಕಾರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೋನಾದಿಂದ ಗುಣಮುಖರಾದವರು ಪ್ರಯಾಣಿಸುವುದಕ್ಕೆ ಹಾಗೂ ಕೆಲಸಕ್ಕೆ ಮರಳಲು ಸಹಕಾರಿಯಾಗುವಂತೆ ಅವರಿಗೆ ಅನುಮತಿ ನೀಡಲು ಕೆಲವು ಸರ್ಕಾರಗಳು ಚಿಂತನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಡಬ್ಲ್ಯುಹೆಚ್ಒ ಎಚ್ಚರಿಕೆ ಮಹತ್ವ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com