ಪಾಕ್ ಸಿನಿಮಾ ನಟಿಯೊಂದಿಗೆ ಭೂತಕ ಪಾತಕಿ ದಾವೂದ್ ಇಬ್ರಾಹಿಂ ಪ್ರೇಮಾಯಣ?

1993 ರ ಮುಂಬೈ ಸರಣಿ ಸ್ಫೋಟಗಳ ರೂವಾರಿ, ಭೂಗತ ಪಾತಕಿ  ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಚಿತ್ರರಂಗದ   ಪ್ರಮುಖ  ನಟಿ ಮೆಹ್ವೀಶ್ ಹಯಾತ್ ರೊಂದಿಗೆ   ಸಂಬಂಧವಿದೆಯೇ?  ಎಂದು ಪ್ರಶ್ನಿಸಿದರೆ   ಹೌದು  ಎನ್ನುತ್ತವೆ  ಕೆಲವು    ಪಾಕಿಸ್ತಾನದ  ಚಿತ್ರರಂಗದ  ಮೂಲಗಳು.

Published: 25th August 2020 11:20 AM  |   Last Updated: 25th August 2020 11:20 AM   |  A+A-


Dawood_with_Lover1

ನಟಿ ಮೆಹ್ವೀಶ್ ಹಯಾತ್ ರೊಂದಿಗೆ ದಾವೂದ್ ಇಬ್ರಾಹೀಂ

Posted By : Nagaraja AB
Source : UNI

ಕರಾಚಿ: 1993 ರ ಮುಂಬೈ ಸರಣಿ ಸ್ಫೋಟಗಳ ರೂವಾರಿ, ಭೂಗತ ಪಾತಕಿ  ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಚಿತ್ರರಂಗದ   ಪ್ರಮುಖ  ನಟಿ ಮೆಹ್ವೀಶ್ ಹಯಾತ್ ರೊಂದಿಗೆ   ಸಂಬಂಧವಿದೆಯೇ?  ಎಂದು ಪ್ರಶ್ನಿಸಿದರೆ   ಹೌದು  ಎನ್ನುತ್ತವೆ  ಕೆಲವು    ಪಾಕಿಸ್ತಾನದ  ಚಿತ್ರರಂಗದ  ಮೂಲಗಳು.

ದಶಕಗಳ  ಹಿಂದೆ ಭಾರತದಿಂದ  ಪರಾರಿಯಾಗಿರುವ  ದಾವೂದ್  ಇಬ್ರಾಹಿಂ  ಪಾಕಿಸ್ತಾನದ ಕರಾಚಿಯ  ಪ್ರಮುಖ  ಪ್ರದೇಶದ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ. ದಾವೂದ್ ಇಬ್ರಾಹಿಂ ಪಾಕಿಸ್ತಾನಿ ಚಲನಚಿತ್ರೋದ್ಯಮದೊಂದಿಗೆ, 37 ವರ್ಷದ  ನಟಿ  ಮೆಹ್ವಿಶ್ ಹಯಾತ್  ಜೊತೆ ಸಂಬಂಧ  ಹೊಂದಿದ್ದಾನೆ. ದಾವೂದ್  ಆಕೆಯೊಂದಿಗೆ  ನಿಯಮಿತ ಸಂಪರ್ಕದಲ್ಲಿರುತ್ತಾನೆ ಎಂಬ  ಅಂಶ  ಹೊರಬಿದ್ದಿದೆ.

ಈ  ಹಿಂದೆ   ದಾವೂದ್  ಇಬ್ರಾಹಿಂ   ಮುಂಬೈನಲ್ಲಿ ನಲ್ಲಿದ್ದಾಗಲೂ, ಬಾಲಿವುಡ್  ಸಿನಿ ನಟರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಅ ಸಮಯದಲ್ಲಿ, ದಾವೂದ್  ಹಲವು  ಬಾಲಿವುಡ್  ಸಿನಿಮಾಗಳಿಗೆ  ಬಂಡವಾಳ ಹೂಡಿದ್ದ,  ಹಲವಾರು ಬಾಲಿವುಡ್ ನಟರು ದಾವೂದ್ ಮನೆಯಲ್ಲಿ ನಡೆಯುತ್ತಿದ್ದ ಔತಣ ಕೂಟಗಳಿಗೆ  ಹಾಜರಾಗುತ್ತಿದ್ದರು.ಮುಂಬೈನಿಂದ ಕರಾಚಿಗೆ ಪರಾರಿಯಾದ  ನಂತರ   ಪಾತಕಿ ದಾವೂದ್  ಇಬ್ರಾಹಿಂ  ಚಿತ್ರರಂಗದ ಬಗ್ಗೆ ಆಸಕ್ತಿ ಕಳೆದುಕೊಂಡಿಲ್ಲ ಎಂದು ಹೇಳಲಾಗಿದೆ.  

ಪಾಕಿಸ್ತಾನ ನಟಿ ಮೆಹ್ವಿಶ್, ದಾವೂದ್  ನೊಂದಿಗೆ  ಹೊಂದಿರುವ  ಒಡನಾಟದಿಂದಾಗಿ ೨೦೧೯ ರಲ್ಲಿ ಆಕೆಗೆ   ಪ್ರತಿಷ್ಟಿತ ಪಾಕಿಸ್ತಾನ ನಾಗರಿಕ ಪುರಸ್ಕಾರ  ’ತಮ್ಗಾ ಇಂತಿಯಾಜ್’ ಲಭಿಸಿದೆ  ಎಂಬುದು  ವರದಿ. ಅಂತಹ ಪ್ರಖ್ಯಾತ ನಟಿಯಲ್ಲದಿದ್ದರೂ, ಮೆಹ್ವಿಶ್ ಗೆ  ಸರ್ಕಾರ    ಪ್ರಶಸ್ತಿ ನೀಡಿರುವುದು  ಪಾಕ್   ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp