ಫಿಜರ್-ಬಯೋಟೆಕ್ ಲಸಿಕೆಗೆ ಬ್ರಿಟನ್ ಅನುಮೋದನೆ, ಮುಂದಿನ ವಾರ ಬಿಡುಗಡೆ

ಕೋವಿಡ್-19 ಗೆ ತುರ್ತಾಗಿ ಬಳಕೆ ಮಾಡಲು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ.

Published: 02nd December 2020 01:27 PM  |   Last Updated: 02nd December 2020 01:27 PM   |  A+A-


UK approves Pfizer-BioNTech vaccine use for COVID-19 immunization, rollout 'next week'

ಫಿಜರ್-ಬಯೋಟೆಕ್ ಲಸಿಕೆಗೆ ಬ್ರಿಟನ್ ಅನುಮೋದನೆ, ಮುಂದಿನ ವಾರ ಬಿಡುಗಡೆ

Posted By : Srinivas Rao BV
Source : The New Indian Express

ಕೋವಿಡ್-19 ಗೆ ತುರ್ತಾಗಿ ಬಳಕೆ ಮಾಡಲು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ. 

ಈ ಬೆಳವಣಿಗೆಯನ್ನು ಕೊರೋನಾಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯೂ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಲಸಿಕೆ ಮುಂದಿನ ವಾರದ ವೇಳೆಗೆ ಚಲಾವಣೆಗೆ ಬರಲಿದ್ದು, ಕೋವಿಡ್-19 ನಿಯಂತ್ರಿಸಲು ತನ್ನ ಪ್ರಜೆಗಳಿಗೆ ಲಸಿಕೆ ಹಾಕಿಸುವುದನ್ನು ಪ್ರಾರಂಭಿಸಿದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಬ್ರಿಟನ್ ಕೂಡ ಒಂದಾಗಿರಲಿದೆ.

ಬ್ರಿಟನ್ ನಂತೆಯೇ ಇತರ ರಾಷ್ಟ್ರಗಳೂ ಸಹ ತಮ್ಮ ಪ್ರಜೆಗಳಿಗೆ ಕೋವಿಡ್-19 ಲಸಿಕೆಯನ್ನು ನೀಡುವುದಕ್ಕೆ ತುದಿಗಾಲಲ್ಲಿ ನಿಂತಿವೆ.

ಬ್ರಿಟನ್ ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಲಸಿಕೆ ಮುಂದಿನ ವಾರದಿಂದ ಲಭ್ಯವಾಗಲಿದೆ ಎಂದು ಹೇಳಿದೆ.

ಬ್ರಿಟನ್, 20 ಮಿಲಿಯನ್ ಮಂದಿಗೆ ಆಗುವಷ್ಟು ಫಿಜರ್ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ ವರ್ಷಾಂತ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.
 

Stay up to date on all the latest ಅಂತಾರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp