ಅಲ್ಲಿ ಅಮೆರಿಕಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ: ಇಲ್ಲಿ ಪಾಕ್ನಲ್ಲಿ ಸಿಖ್ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಧ್ವಂಸ

ಲಾಹೋರ್ ಕೋಟೆಯಲ್ಲಿನ ಸಿಖ್ ನಾಯಕ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ.
ಮಹಾರಾಜ ರಂಜಿತ್ ಸಿಂಗ್
ಮಹಾರಾಜ ರಂಜಿತ್ ಸಿಂಗ್

ಲಾಹೋರ್: ಲಾಹೋರ್ ಕೋಟೆಯಲ್ಲಿನ ಸಿಖ್ ನಾಯಕ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ.

ಮಹಾರಾಜ ರಂಜಿತ್ ಸಿಂಗ್ ಅವರು ಸಿಖ್ ಸಾಮ್ರಾಜ್ಯದ ರಾಜರಾಗಿದ್ದರು. ಈ ಸಾಮ್ರಾಜ್ಯ ಭಾರತದ ಪಂಜಾಬ್ ಪಾಕಿಸ್ತಾನದ ಪಂಜಾಬ್, ಸಿಂಧ್ ನ ಕೆಲವು ಭಾಗಗಳು ಮತ್ತು ಖೈಬರ್ ಫಖ್ತುಂಕ್ವಾದ ಕೆಲ ಪ್ರದೇಶಗಳನ್ನು ವ್ಯಾಪಿಸಿತ್ತು.ರಂಜಿತ್ ಸಿಂಗ್  ಪ್ರತಿಮೆಯನ್ನು ಅವರ 180 ನೇ ಪುಣ್ಯತಿಥಿಯ ಅಂಗವಾಗಿ ಮಾಯ್ ಜಿಂದಾನ್ ಹವೇಲಿಯಲ್ಲಿರುವ ಲಾಹೋರ್ ಕೋಟೆಯಲ್ಲಿ ಸಿಖ್ ಇತಿಹಾಸಕಾರ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ ಬಾಬಿ ಸಿಂಗ್ ಬನ್ಸಾಲ್ ಸ್ಥಾಪಿಸಿದ್ದರು.

ಬನ್ಸಾಲ್ ಅವರ ಲಂಡನ್ ಮೂಲದ ಸಂಸ್ಥೆ ಪ್ರತಿಮೆ ಸ್ಥಾಪನೆಗೆ ಧನಸಹಾಯ ನೀಡಿತ್ತು.ಪಂಜಾಬ್ ನ ವಿವಿಧ ಸಮುದಾಯಗಳನ್ನು ಒಗ್ಗೂಡಿಸಲು ಮತ್ತು ಸಿಖ್ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಬನ್ಸಾಲ್ ಪ್ರತಿಷ್ಠಾನದಿಂದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಪ್ರತಿಮೆಯನ್ನು 2019ರ ಜೂನ್ ನಲ್ಲಿ ಅನಾವರಣಗೊಳಿಸಲಾಗಿತ್ತು. ಆದರೆ,  ಅನಾವರಣಗೊಂಡ ಒಂದೇ ವರ್ಷದಲ್ಲಿ ಪ್ರತಿಮೆ ದಾಳಿಗೆ ಒಳಗಾಗಿದೆ.

ಇಬ್ಬರು ವ್ಯಕ್ತಿಗಳು ದೊಣ್ಣೆಗಳಿಂದ ಹೊಡೆದಿದ್ದರಿಂದ ಪ್ರತಿಮೆಯ ಒಂದು ತೋಳು ಮುರಿದು ಇತರ ಭಾಗಗಳಿಗೆ ಹಾನಿಯಾಗಿದೆ. ದಾಳಿಕೋರರು ರಂಜಿತ್ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

ಇತ್ತೀಚಿನ ದಾಳಿಯಲ್ಲಿ, ಮುಸ್ಲಿಮರ ವಿರುದ್ಧ ದೌರ್ಜನ್ಯ ಎಸಗಿದಕ್ಕಾಗಿ ಪ್ರತಿಮೆ ಧ್ವಂಸಗೊಳಿಸಲಾಗಿದೆ ಎಂದು ಬಂಧಿತ ವ್ಯಕ್ತಿ ಪೊಲೀಸರ ಮುಂದೆ ಹೇಳಿದ್ದಾನೆ.  ಡಾನ್ ಪತ್ರಿಕೆ ವರದಿಯಂತೆ, ಇತ್ತೀಚೆಗೆ ಮೃತಪಟ್ಟ ಖಾದಿಮ್ ಹುಸೇನ್ ರಿಜ್ವಿ ಎಂಬ ವ್ಯಕ್ತಿ ಸಿಖ್ ರಾಜ ರಂಜಿತ್ ಸಿಂಗ್ ವಿರುದ್ಧ ದ್ವೇಷದ ಬೋಧನೆ ಮಾಡಿದ್ದಾನೆ.

ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಸಿಖ್ ಅಮೆರಿಕನ್ ಯುವಕರು ಆಯೋಜಿಸಿದ್ದ ಪ್ರತಿಭಟನೆ ವೇಳೆಯಲ್ಲಿ ಖಲಿಸ್ತಾನಿ ಪ್ರತ್ಯೇಕತೆಯ ಸದಸ್ಯರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com