ಅಮೆರಿಕಾದ ಶತ್ರುಗಳು ಪರಾರಿಯಾಗಿದ್ದಾರೆ: ದೋಷಾರೋಪ ಎದುರಿಸುತ್ತಿರುವ ಡೊನಾಲ್ಡ್ ಟ್ರಂಪ್ ಭಾಷಣ 

ಅಸಾಧಾರಣ ಪರಿಸ್ಥಿತಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾಷಣ
ಡೊನಾಲ್ಡ್ ಟ್ರಂಪ್ ಭಾಷಣ

ವಾಷಿಂಗ್ಟನ್​: ಅಸಾಧಾರಣ ಪರಿಸ್ಥಿತಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.


 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಧಿಕಾರ ದುರ್ಬಳಕೆಯ ದೋಷಾರೋಪ ಎದುರಾಗಿ, ಇಂಪೀಚ್​ಮೆಂಟ್​ ಜರುಗಿಸುವ ಕುರಿತ ಪ್ರಸ್ತಾವನೆಯ ಪರವಾಗಿ ಅಲ್ಲಿನ ಹೌಸ್ ಆಫ್ ರೆಪ್ರಸೆಂಟೇಟಿವ್ಸ್​ನಲ್ಲಿ ಬಹುಮತ ಲಭಿಸಿದ ನಂತರ ದೇಶವನ್ನುದ್ದೇಶಿಸಿ ಭಾರತೀಯ ಕಾಲಮಾನ ಕಳೆದ ರಾತ್ರಿ ಮಾತನಾಡಿದ ಅವರಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ರಿಪಬ್ಲಿಕನ್ನರು ಮತ್ತೆ ನಾಲ್ಕು ವರ್ಷ ಟ್ರಂಪ್ ಎಂದು ಕೂಗಿದರೆ ಡೆಮೊಕ್ರಾಟ್ಸ್ ಸದಸ್ಯರು ಮೌನವಹಿಸಿದರು.


ಅಮೆರಿಕಾದಲ್ಲಿ ಈ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಅಧಿಕಾರ ದುರ್ಬಳಕೆ ದೋಷಾರೋಪ ಎದುರಿಸಿ ಮರು ಆಯ್ಕೆ ಬಯಸುತ್ತಿರುವ ಮೊದಲ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಆಗಿದ್ದಾರೆ.


ಅಮೆರಿಕಾದ ಶತ್ರುಗಳು ಪರಾರಿಯಾಗಿದ್ದಾರೆ. ಅಮೆರಿಕಾದ ಭವಿಷ್ಯ ಉದಯವಾಗುತ್ತಿದ್ದು ಅದು ಉಜ್ವಲವಾಗಿದೆ. ಕೇವಲ ಮೂರು ವರ್ಷಗಳಲ್ಲಿ ನಾವು ಅಮೆರಿಕಾದ ಅವನತಿಯ ಮನಸ್ಥಿತಿಯನ್ನು ಛಿದ್ರಗೊಳಿಸಿದ್ದೇವೆ. ಅಮೆರಿಕಾದ ಭವಿಷ್ಯ ಅಧಃಪತನಕ್ಕೆ ಇಳಿಯುವುದನ್ನು ಸಹ ತಪ್ಪಿಸಿದ್ದೇವೆ. ಕೆಲ ಸಮಯಗಳ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ನಾವು ಮುಂದೆ ಹೋಗುತ್ತಿದ್ದು ಇನ್ನು ನಾವು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಟ್ರಂಪ್ ಹೇಳಿದರು. ರಿಪಬ್ಲಿಕನ್ ಸದಸ್ಯರು ಟ್ರಂಪ್ ಅವರ ಪ್ರತಿಯೊಂದು ಮಾತುಗಳಿಗೆ ಚಪ್ಪಾಳೆ ಹೊಡೆದು ಅವರನ್ನು ಹುರಿದುಂಬಿಸುತ್ತಿದ್ದರು. 


ಏನಿದು ಅಧಿಕಾರ ದುರ್ಬಳಕೆ ಆರೋಪ: 2020ರ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ರಾಜಕೀಯ ಪ್ರತಿಸ್ಪರ್ಧಿಯನ್ನು ಮಟ್ಟಹಾಕಲು ಟ್ರಂಪ್ ಅವರು ವೈಟ್ ಹೌಸ್​ನ ಅಧಿಕಾರವನ್ನು ದುರುಪಯೋಗ ಪಡಿಸಿದ್ದಾರೆ. ಅವರು ಉಕ್ರೈನ್ ಸರ್ಕಾರದ ಮೂಲಕ ಪ್ರತಿಸ್ಪರ್ಧಿ ಜಾಯ್ ಬಿಡೆನ್ ವಿರುದ್ಧ ತನಿಖೆಗೆ ಆದೇಶಿಸಲು ಪ್ರಭಾವ ಬೀರಿದ್ದಾರೆ ಎಂದು ದೋಷಾರೋಪ ಹೊರಿಸಲಾಗಿದೆ. 


ಸೆನೆಟ್ ವಿಚಾರಣೆ ಮತ್ತು ಅವರನ್ನು ಪದಚ್ಯುತಗೊಳಿಸುವ ಮಹಾಭಿಯೋಗ ಇದಾಗಿದೆ. ಹೌಸ್ ಆಫ್ ರೆಪ್ರಸೆಂಟೇಟಿವ್ಸ್​ ನಲ್ಲಿ ಡೆಮಾಕ್ರಟ್​ಗಳಿಗೆ ಸರಳ ಬಹುಮತ ಇದ್ದು, ಯಾವುದೇ ಪ್ರಸ್ತಾವನೆಗೆ ಬಹುಮತ ಪಡೆಯುವುದು ವಿಪಕ್ಷಕ್ಕೆ ಸರಳವಾಗಿದೆ. ಅಮೆರಿಕದ ಇತಿಹಾಸಲ್ಲಿ ಈ ರೀತಿ ಇಂಪೀಚ್​ಮೆಂಟ್​ ಎದುರಿಸುತ್ತಿರುವ ಮೂರನೇ ಅಧ್ಯಕ್ಷ ಟ್ರಂಪ್ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com