ಬಾಂಗ್ಲಾದೇಶ: ದೋಣಿ ಮಗುಚಿ 15 ರೋಹಿಂಗ್ಯನ್ನರ ಸಾವು, 40 ಮಂದಿ ಕಾಣೆ
ದೋಣಿ ಮಗುಚಿ 15 ಮಂದಿ ರೋಹಿಂಗ್ಯನ್ನರು ಸಾವನ್ನಪ್ಪಿ, ಇತರ 40 ಮಂದಿ ಕಾಣೆಯಾಗಿರುವ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್ ಬಜಾರ್‌ನ ಟೆಂಕಫ್ ಉಪ ಜಿಲ್ಲಾದಲ್ಲಿ ನಡೆದಿದೆ.
Published: 11th February 2020 11:36 AM | Last Updated: 11th February 2020 11:36 AM | A+A A-

ಸಾಂದರ್ಭಿಕ ಚಿತ್ರ
ಢಾಕಾ: ದೋಣಿ ಮಗುಚಿ 15 ಮಂದಿ ರೋಹಿಂಗ್ಯನ್ನರು ಸಾವನ್ನಪ್ಪಿ, ಇತರ 40 ಮಂದಿ ಕಾಣೆಯಾಗಿರುವ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್ ಬಜಾರ್‌ನ ಟೆಂಕಫ್ ಉಪ ಜಿಲ್ಲಾದಲ್ಲಿ ನಡೆದಿದೆ.
ಸೇಂಟ್ ಮಾರ್ಟಿನ್ಸ್ ದ್ವೀಪದ ಚೆರಾಡಿಪ್‌ನಲ್ಲಿರುವ ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಮಧ್ಯರಾತ್ರಿ ಅವರು ಅಕ್ರಮವಾಗಿ ಮಲೇಷ್ಯಾಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಾಂಗ್ಲಾದೇಶ ಕೋಸ್ಟ್ ಗಾರ್ಡ್‌ನ ಸೇಂಟ್ ಮಾರ್ಟಿನ್ ಸ್ಟೇಷನ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ನಯೀಮ್ ಉಲ್ ಹಕ್ ಸಾವಿನ ಅಂಕಿಅಂಶಗಳನ್ನು ಯುಎನ್‌ಐಗೆ ದೃಢಪಡಿಸಿದ್ದಾರೆ.
ಮೂಲಗಳ ಪ್ರಕಾರ ಬೋಟ್ ನಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದ್ದು, ಈ ವರೆಗೂ ಸುಮಾರು 70 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಂತೆಯೇ ಸಾವನ್ನಪ್ಪಿದವರ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲವಾದರೂ, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.