ಎಫ್‌ಎಟಿಎಫ್‌ ನಿಂದ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ: ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಸಂದೇಶ ರವಾನೆ 

ಹಣಕಾಸು ವ್ಯವಸ್ಥೆಯ ಮೇಲಿನ ಜಾಗತಿಕ ಕಣ್ಗಾವಲು ಸಂಸ್ಥೆ (ಎಫ್‌ಎಟಿಎಫ್‌) ಸಭೆಯಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ ಉಂಟಾಗಿದೆ. 

Published: 18th February 2020 06:51 PM  |   Last Updated: 18th February 2020 06:51 PM   |  A+A-


Imran Khan

ಇಮ್ರಾನ್ ಖಾನ್

Posted By : Srinivas Rao BV
Source : The New Indian Express

ಪ್ಯಾರಿಸ್: ಹಣಕಾಸು ವ್ಯವಸ್ಥೆಯ ಮೇಲಿನ ಜಾಗತಿಕ ಕಣ್ಗಾವಲು ಸಂಸ್ಥೆ (ಎಫ್‌ಎಟಿಎಫ್‌) ಸಭೆಯಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ ಉಂಟಾಗಿದೆ. 

ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನವನ್ನು ಈ ಹಿಂದೆ ಎಫ್ಎಟಿಎಫ್ ಬೂದು ಪೊಟ್ಟಿಯಲ್ಲೇ ('ಗ್ರೇ ಲಿಸ್ಟ್‌') ಇರಿಸಿತ್ತು. ಈಗ 5 ದಿನಗಳ ಕಾಲ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಸರ್ವಸದಸ್ಯರ ಅಧಿವೇಶನದಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಪರಿಶೀಲನೆ ನಡೆಸಲಾಗಿದ್ದು, ಪಾಕಿಸ್ತಾನದ ಕ್ರಮಗಳು ಸಮಾಧಾನಕರವಾಗಿಲ್ಲ ಎಂದು ಹೇಳಿದೆ. 

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಕಠಿಣ ಕಾನೂನು ವಿಧಿಸಬೇಕು ಎಂದು ಪಾಕಿಸ್ತಾನಕ್ಕೆ ಎಫ್‌ಎಟಿಎಫ್‌ ಹೇಳಿದ್ದು, ಬೂದು ಪೊಟ್ಟಿಯಲ್ಲೇ ('ಗ್ರೇ ಲಿಸ್ಟ್‌') ಮುಂದುವರೆಸುವುದಾಗಿ ಹೇಳಿದೆ. ಈ ಬೆಳವಣಿಗೆಯಿಂದ ಜಾಗತಿಕ ಮಟ್ಟದಲ್ಲಿ ಪಾಕ್ ಗೆ ಮತ್ತೊಮ್ಮೆ ಭಾರಿ ಮುಖಭಂಗ ಉಂಟಾಗಿದೆ.
 
ಎಫ್‌ಎಟಿಎಫ್‌ ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಲ್ಲೇ ಮುಂದುವರೆಸಿರುವುದರಿಂದ ಈಗಾಗಲೇ ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ, ಯುರೋಪಿಯನ್ ಯೂನಿಯನ್ ನಿಂದ ಬರುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ ಬಿದ್ದಿದೆ. 

ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಫ್ಎಟಿಎಫ್ 27 ಅಂಶಗಳ ಯೋಜನೆಯನ್ನು ಪಾಕ್ ಗೆ ನೀಡಿದ್ದು ಇದನ್ನು ಪರಿಣಾಮಕಾರಿ ಜಾರಿಗೊಳಿಸದೇ ಇದ್ದಲ್ಲಿ ಪಾಕ್ ನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು. 

ಎಫ್‌ಎಟಿಎಫ್‌ ಸಭೆಗೂ ಕೆಲವೇ ದಿನಗಳ ಮುನ್ನ ಜಾಗತಿಕ ಸಮುದಾಯದ ಕಣ್ಣೊರೆಸುವ ನಾಟಕವಾಡಿದ್ದ ಪಾಕ್ ಉಗ್ರರಿಗೆ ಆರ್ಥಿಕ ನೆರವು ನೀಡುವ ಎರಡು ಪ್ರಕರಣಗಳಲ್ಲಿ ಹಫೀಜ್ ಸಯೀದ್ ಗೆ ಜೈಲು ಶಿಕ್ಷೆ ವಿಧಿಸಿತ್ತು. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp