ಬಾಗ್ದಾದ್ ನ ಗ್ರೀನ್ ಜೋನ್, ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ

ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮನಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಶನಿವಾರ ಬಾಗ್ದಾದ್ ನ ಹಸಿರುವ ವಲಯ ಮತ್ತು ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ...
ಬಾಗ್ದಾದ್ ನ ಅಮೆರಿಕ ರಾಯಭಾರ ಕಚೇರಿ
ಬಾಗ್ದಾದ್ ನ ಅಮೆರಿಕ ರಾಯಭಾರ ಕಚೇರಿ

ಬಾಗ್ದಾದ್: ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮನಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಶನಿವಾರ ಬಾಗ್ದಾದ್ ನ ಹಸಿರುವ ವಲಯ ಮತ್ತು ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇಂದು ಸಂಜೆ ಬಾಗ್ದಾದ್ ನಲ್ಲಿ ಅಮೆರಿಕ ರಾಯಭಾರ ಕಚೇರಿ ಇರುವ ಭಾರೀ ಭದ್ರತೆಯ ಗ್ರೀನ್ ಜೋನ್(ಹಸಿರು ವಲಯ) ಮೇಲೆ ಎರಡು ಸುತ್ತಿನ ಕ್ಷಿಪಣಿ ದಾಳಿ ನಡೆದದೆ. ಒಂದು ಕ್ಷಿಪಣಿ ವಲಯದೊಳಗೆ ಹೊಡೆದರೆ, ಇನ್ನೊಂದು ಎನ್ಕ್ಲೇವ್ ಹತ್ತಿರ ಇಳಿಯಿತು ಎಂದು ಇರಾಕಿ ಸೇನೆ ತಿಳಿಸಿದೆ.

ಇನ್ನು ಉತ್ತರ ಬಾಗ್ದಾದ್ ನ ಬಲದ್ ವಾಯುನೆಲೆಯ ಅಮೆರಿಕ ಪಡೆಗಳ ಮೇಲೆ ಕತ್ಯೂಷ್ ರಾಕೇಟ್ ದಾಳಿ ನಡೆಸಲಾಗಿದೆ ಎಂದು ಇರಾಕಿ ಸೇನಾ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆಯಷ್ಟೇ ಇರಾಕ್‌ನ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ ಎಂದು ಸರ್ಕಾರಿ ವಾಹಿನಿ ವರದಿ ಮಾಡಿದೆ. ಇರಾನ್‌ನ ಉನ್ನತ ಸೇನಾಧಿಕಾರಿಯನ್ನು ಕೊಂದ ಒಂದು ದಿನದ ನಂತರ ಅಮೆರಿಕ ಮತ್ತೆ ಇರಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದೆ.

ಬಾಗ್ದಾದ್‌ನ ಉತ್ತರ ಭಾಗದಲ್ಲಿ ನಡೆದ ದಾಳಿಗೆ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಆದರೆ ಯಾರನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ನಡೆದಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com