ಜಾಗತಿಕ ಭಯೋತ್ಪಾದನೆ ಹೆಚ್ಚಾಗಲು ಇರಾನ್ ಕಾರಣ, ಅದರ ವಿರುದ್ಧ ಇಡೀ ವಿಶ್ವ ಒಂದಾಗಬೇಕಿದೆ: ಡೊನಾಲ್ಡ್‌ ಟ್ರಂಪ್‌

ಜಾಗತಿಕ ಭಯೋತ್ಪಾದನೆ ಹೆಚ್ಚಾಗಲು ಇರಾನ್ ಕಾರಣ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಡೀ ವಿಶ್ವ ಇರಾನ್ ವಿರುದ್ಧ ಒಂದಾಗಿ ಹೋರಾಡಬೇಕಾಗಿದೆ ಎಂದು ಬುಧವಾರ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಜಾಗತಿಕ ಭಯೋತ್ಪಾದನೆ ಹೆಚ್ಚಾಗಲು ಇರಾನ್ ಕಾರಣ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಡೀ ವಿಶ್ವ ಇರಾನ್ ವಿರುದ್ಧ ಒಂದಾಗಿ ಹೋರಾಡಬೇಕಾಗಿದೆ ಎಂದು ಬುಧವಾರ ಹೇಳಿದ್ದಾರೆ.

ಇರಾನ್‌ ಸೇನಾ ದಂಡನಾಯಕ ಖಾಸಿಮ್‌ ಸುಲೇಮಾನಿ ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ನಂತರ ಉಂಟಾಗಿರುವ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದು ನಿಜ. ಆದರೆ, ಇರಾನ್ ಹೇಳಿಕೊಂಡಂತೆ ಅಮೆರಿಕಾದ ಯಾವುದೇ ಯೋಧರು ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಅಮೆರಿಕ ಶಾಂತಿಪ್ರಿಯ ರಾಷ್ಟ್ರ. ಇರಾನ್ ಬಯಸಿದರೆ ಶಾಂತಿ ಮಾತುಕತೆಗೂ ಸಿದ್ಧ ಎಂದಿರುವ ಟ್ರಂಪ್, ಶಸ್ತ್ರಾಸ್ತ್ರಗಳು ಇವೆ ಎಂಬ ಕಾರಣಕ್ಕೆ ಯಾವ ದೇಶದ ಮೇಲೂ ಅದನ್ನೂ ಪ್ರಯೋಗಿಸುವುದಿಲ್ಲ. ಖಾಸಿಂ ಸೊಲೈಮನಿ ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದ್ದ. ಅಲ್ಲದೆ, ಅಮೆರಿಕದ ಭದ್ರೆತೆಗೆ ಬೆದರಿಕೆ ಒಡ್ಡಿದ್ದ ಹೀಗಾಗಿ ಆತನನ್ನು ಕೊಲ್ಲುವುದು ಅನಿವಾರ್ಯವಾಗಿತ್ತು ಎಂದರು.

ಇದೀಗ ಇರಾನ್ ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಬಿಕ್ಕಟ್ಟನ್ನು ಇಲ್ಲಿಗೆ ನಿಲ್ಲಿಸಿದರೆ ಸೂಕ್ತ ಇಲ್ಲದಿದ್ದರೆ ಮುಂದೆ ಆಗಬಹುದಾದ ಪರಿಣಾಮಗಳಿಗೆ ನಾನು ಹೊಣೆ ಅಲ್ಲ ಎಂದು ಇರಾನ್​ ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, "ತಾನು ಅಮೆರಿಕದ ಅಧ್ಯಕ್ಷನಾಗಿರುವವರೆಗೆ ಇರಾನ್ ದೇಶ ಅಣುಶಕ್ತಿಯನ್ನು ಹೊಂದುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ಆ ಮೂಲಕ ಯುದ್ಧದ ಭೀತಿಯನ್ನು ದೂರ ಮಾಡಿದ್ದಾರೆ.

ಇದಕ್ಕು ಮುನ್ನ ಇರಾಕ್ ನ ಅಲ್-ಅಸ್ಸಾದ್‌ನಲ್ಲಿರುವ ಅಮೆರಿಕಾ ಸೇನೆಯ ವೈಮಾನಿಕ ಸ್ಥಾವರದ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 80 ಮಂದಿ ಅಮೆರಿಕಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಪ್ರಕಟಿಸಿತ್ತು. ಅಲ್ಲದೆ ಈ ದಾಳಿ ಅಮೆರಿಕಾಗೆ ನಡೆಸಿದ ಕಪಾಳಮೋಕ್ಷ ಎಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖೊಮೇನಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com