ಆಸ್ಟ್ರೇಲಿಯಾವನ್ನು ಬೆಂಬಿಡೆದೆ ಕಾಡುತ್ತಿರುವ ಅರಣ್ಯ ಕಾಡ್ಗಿಚ್ಚು

ಆಸ್ಟ್ರೇಲಿಯಾದ ಅತ್ಯಂತ ಜನಭರಿತ ಆಗ್ನೇಯ ಭಾಗದತ್ತ ಬಿಸಿ ಗಾಳಿ ಮತ್ತೆ ಬೀಸಿದ್ದು, ಭಾರೀ ಪ್ರಮಾಣದ ಕಾಡ್ಗಿಚ್ಚುಗಳು ಹೊತ್ತಿಕೊಂಡು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೆಲ್ಬರ್ನ್: ಆಸ್ಟ್ರೇಲಿಯಾದ ಅತ್ಯಂತ ಜನಭರಿತ ಆಗ್ನೇಯ ಭಾಗದತ್ತ ಬಿಸಿ ಗಾಳಿ ಮತ್ತೆ ಬೀಸಿದ್ದು, ಭಾರೀ ಪ್ರಮಾಣದ ಕಾಡ್ಗಿಚ್ಚುಗಳು ಹೊತ್ತಿಕೊಂಡು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.

ಇದರಿಂದಾಗಿ ಹಲವಾರು ಪಟ್ಟಣಗಳು ಮತ್ತು ಗ್ರಾಮಗಳು ಕಾಡ್ಗಿಚ್ಚಿನ ತೊಂದರೆಗೆ ಒಳಗಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಈ ವಲಯದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಮತ್ತು ನೋಟಿಸ್ ನೀಡಿದ್ದಾರೆ.

ವಿಕ್ಟೋರಿಯ ರಾಜ್ಯದಾದ್ಯಂತ ಜನರಿಗೆ ವಿಪತ್ತು ನೋಟಿಸ್ ಗಳನ್ನು ಕಳೆದ ವಾರ ನೀಡಲಾಗಿದ್ದು, ನೋಟಿಸ್ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದ್ದು, ಅಪಾಯ ವಲಯದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಸೂಚಿಸಲಾಗಿದೆ.

ನೆರೆಯ ನ್ಯೂಸೌತ್ವೇಲ್ಸ್ ರಾಜ್ಯದಲ್ಲಿ, ಶುಕ್ರವಾರ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಬಗ್ಗೆಯೂ ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ನಾಗರಿಕರಿಗೆ ಸಂದೇಶ ರವಾನಿಸಿದ್ದಾರೆ.

ಕಾಡಿನ ಬೆಂಕಿ ವ್ಯಾಪಿಸಿ, ಪರಿಸರದ ನಿವಾಸಿಗಳಿಗೆ ಗಂಭೀರ ಅಪಾಯ ತರುತ್ತಿದೆ ಎಂದು ವಿಕ್ಟೋರಿಯ ತುರ್ತು ಸೇವೆಗಳ ಸಚಿವೆ ಲೀಸಾ ನೆವಿಲ್ ಹೇಳಿದ್ದಾರೆ.

ಕಾಡ್ಗಿಚ್ಚು ಈಗಾಗಲೇ ಆಸ್ಟ್ರೇಲಿಯಾದ 2.55 ಕೋಟಿ ಎಕರೆ ಜಮೀನನ್ನು ಹಾನಿ ಮಾಡಿದ್ದು, 26 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಮನೆ- ಮಠ ಕಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com