ನೈಜೀರಿಯಾದಲ್ಲಿ ತೈಲ ಕೊಳವೆಮಾರ್ಗ ಸ್ಫೋಟ: ಮೃತರ ಸಂಖ್ಯೆ 5ಕ್ಕೆ ಏರಿಕೆ

ನೈಜೀರಿಯಾದ ವಾಣಿಜ್ಯ ನಗರ ಲಾಗೊಸ್ ನಲ್ಲಿ ಸಂಭವಿಸಿದ ತೈಲ ಕೊಳವೆ ಮಾರ್ಗ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಸರ್ಕಾರಿ ಸ್ವಾಮ್ಯದ ನೈಜೀರಿಯಾ ರಾಷ್ಟ್ರೀಯ ಪೆಟ್ರೋಲಿಯಂ ನಿಗಮ(ಎನ್‍ಎನ್‍ಪಿಸಿ) ಸೋಮವಾರ ತಿಳಿಸಿದೆ.
ನೈಜೀರಿಯಾದಲ್ಲಿ ತೈಲ ಕೊಳವೆಮಾರ್ಗ ಸ್ಫೋಟ: ಮೃತರ ಸಂಖ್ಯೆ 5ಕ್ಕೆ ಏರಿಕೆ
ನೈಜೀರಿಯಾದಲ್ಲಿ ತೈಲ ಕೊಳವೆಮಾರ್ಗ ಸ್ಫೋಟ: ಮೃತರ ಸಂಖ್ಯೆ 5ಕ್ಕೆ ಏರಿಕೆ

ಅಬುಜಾ: ನೈಜೀರಿಯಾದ ವಾಣಿಜ್ಯ ನಗರ ಲಾಗೊಸ್ ನಲ್ಲಿ ಸಂಭವಿಸಿದ ತೈಲ ಕೊಳವೆ ಮಾರ್ಗ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಸರ್ಕಾರಿ ಸ್ವಾಮ್ಯದ ನೈಜೀರಿಯಾ ರಾಷ್ಟ್ರೀಯ ಪೆಟ್ರೋಲಿಯಂ ನಿಗಮ(ಎನ್‍ಎನ್‍ಪಿಸಿ) ಸೋಮವಾರ ತಿಳಿಸಿದೆ.

ಲಾಗೋಸ್ ನ ಅಲಿಮೊಷೊ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದ ನಂತರ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿದೆ. 

ಘಟನೆಯಲ್ಲಿ ಐವರು ಮೃತಪಟ್ಟಿರುವುದು ದುರದೃಷ್ಟಕರ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕರ ಸ್ಥಿತಿ ಗಂಭೀರವಾಗಿದೆ. ತೈಲ ಕೊಳವೆ ಮಾರ್ಗದಿಂದ ಅನಿಲವನ್ನು ಕಳ್ಳತನ ಮಾಡುವ ಜಾಲದಿಂದ ಈ ದುರಂತ ಸಂಭವಿಸಿದೆ.’ ಎಂದು ಎನ್‍ಎನ್‍ಪಿಸಿ ಗ್ರೂಪ್ ವ್ಯವಸಾಪಕ ನಿರ್ದೇಶಕ ಟ್ವೀಟರ್ ಮೂಲಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com