ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಹೆಚ್1-ಬಿ ವೀಸಾ ಮೇಲಿನ ನಿರ್ಬಂಧ ರದ್ದು: ಜೋ ಬಿಡೆನ್

ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತನಾದರೆ ಬಹುತೇಕ ಭಾರತೀಯ ಐಟಿ ವೃತ್ತಿಪರರು ಕೋರುತ್ತಿರುವ ಹೆಚ್-1ಬಿ ವೀಸಾ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ರದ್ದುಗೊಳಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಅಮೆರಿಕಾ ಉಪಾಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್

ವಾಷಿಂಗ್ಟನ್: ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತನಾದರೆ ಬಹುತೇಕ ಭಾರತೀಯ ಐಟಿ ವೃತ್ತಿಪರರು ಕೋರುತ್ತಿರುವ ಹೆಚ್-1ಬಿ ವೀಸಾ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ರದ್ದುಗೊಳಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಅಮೆರಿಕಾ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ಅಮೆರಿಕಾದ ಉದ್ಯೋಗ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದ್ದ ಬೃಹತ್ ಪ್ರಮಾಣದ ಭಾರತೀಯ ಐಟಿ ವೃತ್ತಿವರ್ಗದವರಿಗೆ ಜೂನ್ 23 ರಂದು ಟ್ರಂಪ್ ಸರ್ಕಾರ ಭಾರೀ ಹೊಡೆತ ನೀಡಿತ್ತು. ಅಮೆರಿಕಾ ಜನರಿಗೆ ಉದ್ಯೋಗ ರಕ್ಷಿಸುವ ನಿಟ್ಟಿನಲ್ಲಿ 2020 ಮುಗಿಯುವವರೆಗೂ ಹೆಚ್-1 ಬಿ  ವೀಸಾ ಸೇರಿದಂತೆ ಇತರ ವಿದೇಶಿ ಕೆಲಸಗಾರರಿ ನೀಡಲಾಗುತ್ತಿದ್ದ ವೀಸಾಗಳ ಮೇಲೆ ತಾತ್ಕಾಲಿಕವಾಗಿ ನಿರ್ಬಂಧವನ್ನು ಹೇರಲಾಗಿದೆ.

ಟೌನ್ ಹಾಲ್ ನಲ್ಲಿ ಎನ್ ಬಿಸಿ ನ್ಯೂಸ್ ಆಯೋಜಿಸಿದ್ದ ಏಷ್ಯನ್ ಅಮೆರಿಕ ಮತ್ತು ಫೆಸಿಪಿಕ್ ದ್ಪೀಪರಾಷ್ಟ್ರಗಳ ವಿಷಯ ಕುರಿತ ಸಭೆಯಲ್ಲಿ ಮಾತನಾಡಿದ ಜೋ ಬಿಡೆನ್, ಹೆಚ್-1 ಬಿ ವೀಸಾದಾರರು ದೇಶಕ್ಕೆ ನೀಡಿರುವ ಸೇವೆಯನ್ನು ಶ್ಲಾಘಿಸಿದರು.ಈ ವರ್ಷದವರೆಗೂ ರದ್ದುಪಡಿಸಿರುವ ಹೆಚ್-1ಬಿ ವೀಸಾ ಮೇಲಿನ ನಿರ್ಬಂಧ ತಮ್ಮ ಆಡಳಿತಾವಧಿಯಲ್ಲಿ ಇರುವುದಿಲ್ಲ ಎಂದು ತಿಳಿಸಿದರು.

ವೀಸಾ ಪಡೆದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರು ದೇಶವನ್ನು ಅಭಿವೃದ್ಧಿಗೊಳಿಸಿದ್ದಾರೆ. ಭಾರತ, ಚೀನಾದಂತಹ  ರಾಷ್ಟ್ರಗಳಿಂದ ಬರುವ ಸಾವಿರಾರು ಪ್ರತಿಭಾವಂತ ಉದ್ಯೋಗಿಗಳನ್ನು ತಂತ್ರಜ್ಞಾನ ಕಂಪನಿಗಳು ಅವಲಂಬಿಸುತ್ತಿರುತ್ತವೆ.ತಾನು ಚುನಾವಣೆಯಲ್ಲಿ ಗೆದ್ದರೆ ದೇಶಕ್ಕಾಗಿ ಮಹತ್ವಪೂರ್ಣ ಸೇವೆ ಸಲ್ಲಿಸುತ್ತಿರುವ ಏಷ್ಯನ್ ಅಮೆರಿಕ ಮತ್ತು ಫೆಸಿಪಿಕ್ ದ್ಪೀಪರಾಷ್ಟ್ರಗಳ 1.7 ಮಿಲಿಯನ್ ಜನರು ಸೇರಿದಂತೆ ದಾಖಲಾತಿ ಇಲ್ಲದ 11 ಮಿಲಿಯನ್  ವಲಸಿಗರಿಗೆ ಪೌರತ್ವ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜೋ ಬಿಡೆನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com