ಪಾಕಿಸ್ತಾನದ ಈ ಹಿಂದೂ ದೇವಾಲಯವು ಮುಸ್ಲಿಂ ಯುವಕರ ಜೀವನಾಧಾರ ಮೂಲ ಹೇಗೆ ಗೊತ್ತೆ?

ಪಾಕಿಸ್ತಾನದ ಅತಿದೊಡ್ಡ ಮಹಾನಗರದಲ್ಲಿನ 200 ವರ್ಷಗಳಷ್ಟು ಹಳೆಯ ದೇವಾಲಯ ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಮುಖ ಪೂಜಾ ಸ್ಥಳ ಮಾತ್ರವಲ್ಲದೆ ಈ ಪ್ರದೇಶದ ಯುವ ಮತ್ತು ಉದ್ಯಮಶೀಲ ಮುಸ್ಲಿಂ ಹುಡುಗರಿಗೆ ಜೀವನೋಪಾಯದ ಮೂಲವಾಗಿದೆ
 

Published: 01st June 2020 02:01 PM  |   Last Updated: 01st June 2020 02:04 PM   |  A+A-


Posted By : Raghavendra Adiga
Source : PTI

ಕರಾಚಿ: ಪಾಕಿಸ್ತಾನದ ಅತಿದೊಡ್ಡ ಮಹಾನಗರದಲ್ಲಿನ 200 ವರ್ಷಗಳಷ್ಟು ಹಳೆಯ ದೇವಾಲಯ ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಮುಖ ಪೂಜಾ ಸ್ಥಳ ಮಾತ್ರವಲ್ಲದೆ ಈ ಪ್ರದೇಶದ ಯುವ ಮತ್ತು ಉದ್ಯಮಶೀಲ ಮುಸ್ಲಿಂ ಹುಡುಗರಿಗೆ ಜೀವನೋಪಾಯದ ಮೂಲವಾಗಿದೆ

ಹಿಂದೂ ಸಮುದಾಯದ ಸದಸ್ಯರು ಪೂಜೆಗೆ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಕರಾಚಿ ಬಂದರಿಗೆ ಸಮೀಪವಿರುವ  ಶ್ರೀ ಲಕ್ಷ್ಮಿ ನಾರಾಯಣಮಂದಿರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾರೆ ಇದರಿಂದಾಗಿ  ಸ್ಥಳೀಯ ಮುಸ್ಲಿಂ ಹುಡುಗರಿಗೆ ಜೀವನೋಪಾಯಕ್ಕೆ ಅನುಕೂಲವಾಗಿದೆ.

ಪಾಕಿಸ್ತಾನ ಹಿಂದೂ ಪರಿಷತ್ತಿನ ರಮೇಶ್ ವಾಂಕ್ವಾನಿ ಮಾತಿನಂತೆ ದೇವಾಲಯವು ಹಿಂದೂಗಳ ಪಾಲಿಗೆ ಪವಿತ್ರವಾಗಿದ್ದು ಇದು ಸಮುದ್ರ ತೀರದಲ್ಲಿರುವ ಕಾರಣ ಅಂತ್ಯಕ್ರಿಯೆ ಹಾಗೂ ಇತರೆ ಧಾರ್ಮಿಕ ವಿಧಿಗಳನ್ನು ನಡೆಸಲು ಪವಿತ್ರ ಸ್ಥಳವಾಗಿದೆ. "ಇದು ಕರಾಚಿಯ ಸಮುದ್ರ ದಂಡೆಯಲ್ಲಿದ್ದು ಹೀಗೆ ಈ ಪ್ರದೇಶದಲ್ಲಿರುವ ಏಕೈಕ ದೇವಾಲಯ ಎನಿಸಿದೆ. ಸಮುದ್ರ ತೀರ ಹಿಂದೂಗಳ ಪಾಲಿಗೆ ಅತ್ಯಂತ ಮಹತ್ವದ ಪೂಜಾ ಸ್ಥಳವಾಗಿರುವ ಕಾರಣ ಈ ದೇವಾಲಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ನಮ್ಮ ಆಚರಣೆಗಳ ಭಾಗವಾಗಿ ನಾವು ಅನೇಕ ವಸ್ತುಗಳನ್ನು ಸಮುದ್ರದ ನೀರಿಗೆ  ಸಮರ್ಪಿಸುತ್ತೇವೆ. "  ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರೂ ಆಗಿರುವ ವಾಂಕ್ವಾನಿ ಹೇಳಿದರು.

ದೇವಾಲಯಕ್ಕೆ ಬರುವ ಹಿಂದೂಗಳು ತಮ್ಮ ಆಚರಣೆಗಳ ಭಾಗವಾಗಿ ಸೇತುವೆಯ ಕೆಳಗಿರುವ ಸಮುದ್ರದ ನೀರಿಗೆ ಅಮೂಲ್ಯ ವಸ್ತುಗಳನ್ನು ಒಳಗೊಂಡು ಅನೇಕ ಬಗೆಯ  ವಸ್ತುಗಳನ್ನು ಸಮರ್ಪಿಸುತ್ತಾರೆ. ಇದೇ ವಸ್ತುಗಳನ್ನು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರು ಆಯ್ದುಕೊಂಡು ಅವರ ಜೀವನೋಪಾಯ ರೂಪಿಸಿಕೊಳ್ಳುತ್ತಾರೆ ಎಂದು ಸ್ಥಳೀಯ ಮುಸ್ಲಿಂ ಯುವಕ ಶಫೀಕ್ ಹೇಳಿದ್ದಾರೆ. ದೇವಾಲಯಆರಾಧಕರು ಮತ್ತು ಪ್ರವಾಸಿಗರು ಸಮರ್ಪಿಸಿದ ವಸ್ತುಗಳನ್ನು ಹಿಂಪಡೆಯಲು ಶಫೀಕ್ ಅಲಿ ಮತ್ತು ಇತರರು ಕಾಲಕಾಲಕ್ಕೆ ಸಮುದ್ರಕ್ಕೆ ಧುಮುಕುತ್ತಾರೆ.ಶಫೀಕ್ ಪ್ರಕಾರ, ಹುಡುಗರು ಚಿನ್ನದ ಆಭರಣಗಳು, ಬೆಳ್ಳಿ ಆಭರಣಗಳು, ನಾಣ್ಯಗಳು ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸಮುದ್ರದ ನೀರಿನಿಂದ ಪಡೆದಿದ್ದಾರೆ.

"ನಾವು ಈಜಿನಲ್ಲಿ ಪರಿಣಿತಿ ಪಡೆದಿದ್ದು ನಾವು ನೀರಿಗಿಳಿದಾಗಲೂ ದೀರ್ಘಕಾಲ ನಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯ ಗಳಿಸಿದ್ದೇವೆ." ದೇವಾಲಯಕ್ಕೆ ಭೇಟಿ ನೀಡುವವರು ಅಥವಾ ಅದರ ಉಸ್ತುವಾರಿಗಳು ಧಾರ್ಮಿಕ ಆಚರಣೆಗಳ ಭಾಗವಾಗಿ ನೀಡಲಾದ ವಸ್ತುಗಳನ್ನು  ಪಡೆಯಲು ನಿಮಗೆ ಅಡ್ಡಿ ಇದೆಯೆ ಎಂದು ಕೇಳಲಾಗಿ "ಅವರು ಕೆಲವೊಮ್ಮೆ ಕೂಗಿಕೊಳ್ಳುತ್ತಾರೆ ಹಾಗೂ ದೂರ ಸರಿಯುವಂತೆ ಹೇಳುತ್ತಾರೆ ಹಾಗೆ ವಿರೋಧದ ಬಿಸಿ ಇರುವಾಗ ನಾವು ಕೆಲ ದಿನ ಇತ್ತ ಸುಳಿಯುವುದಿಲ್ಲ. ಆದರೆ ಅದೆಲ್ಲಾ ತಣ್ಣಗಾಗುತ್ತಿದ್ದಂತೆ ಮತ್ತೆ ನಮ್ಮ ಚಟುವಟಿಕೆ ಮುಂದುವರಿಯುತ್ತದೆ.ದೇವಾಲಯವು ಪೂಜೆಗೆ ತೆರೆದುಕೊಳ್ಳುವವರೆಗೂ ನಾವು ಇಲ್ಲಿಯೇ ಇರುತ್ತೇವೆ. ದಿನವಿಡೀ ನಾವು ಸಮುದ್ರದ ನೀರಿನಲ್ಲಿ ಎಸೆದ ವಸ್ತುಗಳನ್ನು ಹುಡುಕುತ್ತಿರುತೇವೆ

"ನಾವು ಸಮುದ್ರದಿಂದ ಹೆಕ್ಕಿದ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಸಮುದ್ರದಲ್ಲಿ ಅನೇಕ ಬಗೆಯ ವಸ್ತುಗಳನ್ನು ದಕ್ಕಿಸಿಕೊಂಡಿದ್ದೇವೆ. ಇಲ್ಲಿಗೆ ಬರುವ ಹಿಂದೂಗಳು ತಮ್ಮ ಪೂಜೆಯಲ್ಲಿ ಮತ್ತು ಅವರ ಆಚರಣೆಗಳಲ್ಲಿ ಬಹಳ ಶ್ರದ್ಧೆ ಹೊಂದಿದ್ದಾರೆ" ಎಂದು ಶಫೀಕ್ ಹೇಳಿದರು.

ಆದರೆ  ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಈ ದಿನಗಳಲ್ಲಿ ದೇವಾಲಯದಲ್ಲಿ ಯಾವುದೇ ವಿಶೇಷ ನಡೆಯುತ್ತಿಲ್ಲ. ಇದರಿಂದ ನಮಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ಅವರು ಹೇಳಿದ್ದಾರೆ."ಇತ್ತೀಚಿನ ದಿನಗಳಲ್ಲಿ  ಕೊರೋನಾ  ಸಮಸ್ಯೆಯಿಂದಾಗಿ ಜನಸಂಚಾರ ಕಡಿಮೆ ಇದೆ. ಗಿದೆ. ನಾವು ಭಕ್ತರಿಗೆ ಸಾಮಾಜಿಕ  ಅಂತರವನ್ನು  ಸಹ ಅನುಸರಿಸುತ್ತೇವೆ. ನಾವು ಒಂದೇ ಸಮಯದಲ್ಲಿ ನಾಲ್ಕು ಅಥವಾ ಐದು ಜನರನ್ನು ದೇವಾಲಯಕ್ಕೆ ಅನುಮತಿಸುವುದಿಲ್ಲ" ಎಂದುದೇವಾಲಯ ಉಸ್ತುವಾರಿಗಳಲ್ಲಿ ಒಬ್ಬರಾದ ವಿವೇಕ್ ವಿವರಿಸಿದರು.

ಎಂಟು ವರ್ಷಗಳ ಹಿಂದೆ, ಸಿಂಧ್ ಹೈಕೋರ್ಟ್ ಕರಾಚಿ ಪೋರ್ಟ್ ಟ್ರಸ್ಟ್ ಅಧಿಕಾರಿಗಳು ದೇವಾಲಯವನ್ನು ನೆಲಸಮ ಮಾಡುವುದನ್ನು ನಿಲ್ಲಿಸಿತು, ಈಗ ಗ್ರ್ಯಾಂಡ್ ಪೋರ್ಟ್ ಎಂದು ಕರೆಯಲ್ಪಡುವ ದೊಡ್ಡ ಮನರಂಜನಾ ಸ್ಥಳ ಮತ್ತು ಫುಡ್ ಕೋರ್ಟ್ ಅನ್ನು ದೇವಾಲಯದ ಹತ್ತಿರ ನಿರ್ಮಿಸಲಾಗುತ್ತಿದೆ.ಪಾಕಿಸ್ತಾನವು ಹಿಂದೂಗಳಿಂದ ಪೂಜಿಸಲ್ಪಟ್ಟ ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ.ಈಶಾನ್ಯ ಚಕ್ವಾಲ್ ಜಿಲ್ಲೆಯ ಕಟಾಸ್ ರಾಜ್ ದೇವಸ್ಥಾನ ಮತ್ತು ದಕ್ಷಿಣ ಸುಕ್ಕೂರ್ ಜಿಲ್ಲೆಯ ಸಾಧು ಬೇಲಾ ದೇವಾಲಯವು ಹಿಂದೂಗಳು ಹೆಚ್ಚು ಭೇಟಿ ನೀಡುವ ಎರಡು ತಾಣಗಳಾಗಿವೆ, 

ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದರೆ ಹಿಂದೂ ಸಮುದಾಯದವರ ಅಂದಾಜಿನಂತೆ , ದೇಶದಲ್ಲಿ 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದಾರೆ.ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ, ಅಲ್ಲಿ ಅವರು ತಮ್ಮ ಮುಸ್ಲಿಂ ನೆರೆಹೊರೆಯವರೊಡನೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯ ವಿನಿಮಯ ಮಾಡಿಕೊಂಡಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp