ಗಡಿ ವಿವಾದ: ಅವಹೇಳನಕಾರಿ ಪೋಸ್ಟ್, ಭಾರತೀಯ ವಿದ್ಯಾರ್ಥಿ ವಿರುದ್ಧ ಕ್ರಮದ ಬೆದರಿಕೆ ಹಾಕಿದ ಚೀನಾ ವಿವಿ!

ಗಡಿ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಜನರ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿರುವ ಭಾರತೀಯ ವಿದ್ಯಾರ್ಥಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚೀನಾದ ವಿಶ್ವವಿದ್ಯಾನಿಲಯವೊಂದು ಬೆದರಿಕೆ ಹಾಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಗಡಿ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಜನರ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿರುವ ಭಾರತೀಯ ವಿದ್ಯಾರ್ಥಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚೀನಾದ ವಿಶ್ವವಿದ್ಯಾನಿಲಯವೊಂದು ಬೆದರಿಕೆ ಹಾಕಿದೆ.

ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿರುವ ಜಿಯಾಂಗ್ಸು ವಿವಿಯ  ಕಡುಕ್ಕಸ್ಸೇರಿ ಎಂಬ ಉಪನಾಮದ ಭಾರತೀಯ ವಿದ್ಯಾರ್ಥಿ ಹಾಕಿದ್ದ ಪೋಸ್ಟ್ ಚೀನಾದ ಸಿನಾ ವೀಬೊ ನಂತಹ ಟ್ವಿಟರ್ ನಲ್ಲಿ ಸಖತ್ ವೈರಲ್ ಆಗಿದೆ ಎಂದು ದಿ ಗ್ಲೂಬಲ್ ಟೈಮ್ಸ್ ವರದಿ ಮಾಡಿದೆ. 

ಹೆಚ್ಚಿನ ತನಿಖೆಯ ನಂತರ ಹೊರ ದೇಶಗಳ ವಿದ್ಯಾರ್ಥಿಗಳ ಮೇಲಿನ ನಿಯಮಗಳ ಪ್ರಕಾರ ಕಡುಕ್ಕಸ್ಸೇರಿ ಮಾಡಿದ್ದ ತಪ್ಪಿಗೆ ವಿಶ್ವವಿದ್ಯಾಲಯವು ಶಿಕ್ಷೆ ವಿಧಿಸುತ್ತದೆ ಎಂದು ಜೆಎಸ್‌ಯುನ ವು ಉಪನಾಮದ ಅಧಿಕಾರಿಯ  ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ನಂತರ ಭಾರತೀಯ ವಿದ್ಯಾರ್ಥಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರ ಹುತಾತ್ಮರಾದ ನಂತರ ಗಡಿಯಲ್ಲಿ ಚೀನಾ ಹಾಗೂ ಭಾರತ ನಡುವಿನ ಪರಿಸ್ಥಿತಿ ಬಿಗಿಯಾಗಿರುವಂತೆ ಭಾರತೀಯ ವಿದ್ಯಾರ್ಥಿ ತನ್ನ ಹೇಳಿಕೆನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. 

ಈ ಪ್ರದೇಶದ ಮೇಲೆ ಚೀನಾ ಸಾರ್ವಭೌಮತ್ವದ ಹಕ್ಕು ಪ್ರತಿಪಾದನೆ ಉದ್ವಿಗ್ನತೆಗೆ ಕಾರಣವಾಗಿದ್ದು. ಜನರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.  ಏತನ್ಮಧ್ಯೆ, ಜುಲೈ 1 ರಿಂದ ಬಾಂಗ್ಲಾದೇಶದಿಂದ ಬರುವ ಶೇಕಡಾ 98 ರಷ್ಟು ಉತ್ಪನ್ನಗಳನ್ನು ಸುಂಕ ರಹಿತವಾಗಿ ಮಾಡುವ ಮೂಲಕ ಚೀನಾ ವ್ಯಾಪಾರ ಬಿಕ್ಕಟ್ಟಿಗೆ ಪ್ರತಿಕ್ರಿಯೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com