ದುಬೈನಲ್ಲಿ ಪಾಕಿಸ್ತಾನಿ ವ್ಯಕ್ತಿಯಿಂದ ಭಾರತೀಯ ಮೂಲದ ದಂಪತಿಗಳ ಬರ್ಬರ ಹತ್ಯೆ!

ಪಾಕಿಸ್ತಾನದ ವ್ಯಕ್ತಿಯೊಬ್ಬ ಭಾರತೀಯ ಉದ್ಯಮಿ ಮತ್ತು ಅವರ ಪತ್ನಿಯನ್ನು  ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ದುಬೈನಲ್ಲಿ ನಡೆದಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಪಾಕಿಸ್ತಾನದ ವ್ಯಕ್ತಿಯೊಬ್ಬ ಭಾರತೀಯ ಉದ್ಯಮಿ ಮತ್ತು ಅವರ ಪತ್ನಿಯನ್ನು  ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ದುಬೈನಲ್ಲಿ ನಡೆದಿದೆ. 

ದುಬೈನಲ್ಲಿನ ಅರೇಬೊಯನ್ ರ್ಯಾಂಚಸ್ ನಲ್ಲಿನ ಮನೆಯಲ್ಲಿದ್ದ ಉದ್ಯಮಿ ಹಿರೇನ್ ಅಧಿಯಾ ಮತ್ತು ಆತನ ಪತ್ನಿ ವಿಧಿ ಅಧಿಯಾ ಅವರನ್ನು ಪಾಕಿಸ್ತಾನದ ವ್ಯಕ್ತಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿಶೇಷವೆಂದರೆ ಹತ್ಯೆ ಆರೋಪಿಯನ್ನು ದುಬೈ ಪೋಲೀಸರು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬಂಧಿಸಿದ್ದಾರೆ. ದಂಪತಿಯ ಪುತ್ರಿ ದುಬೈ ಪೊಲೀಸ್ ಕಮಾಂಡ್ ರೂಮ್‌ಗೆ ಕರೆ ಮಾಡಿ ಘಟನೆ ವರದಿ ಮಾಡಿದ ಬಳಿಕ ಪೋಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ಮಂಗಳವಾರ ವರದಿ ಮಾಡಿದೆ.

ಕಂಪನಿಯೊಂದರಲ್ಲಿ ಕಾರ್ಯನಿರ್ವಾಹಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಹಿರೇನ್ ಹಾಗೂ ಅವರ ಪತ್ನಿಗೆ . 18 ಮತ್ತು 13 ವರ್ಷ ವಯಸ್ಸಿನ ಅವರ ಇಬ್ಬರು ಹೆಣ್ಣುಮಕ್ಕಳಿದ್ದರು. ದುಬೈನ ಕಾನ್ಸುಲೇಟ್ ಜನರಲ್ ದಂಪತಿಯ ಗುರುತು ಪತ್ತೆ ಮಾಡಿದೆ.  ಜೂನ್ 18 ರಂದು ದಂಪತಿ ಹಾಗೂ ಕುಟುಂಬ  ನಿದ್ರಿಸುತ್ತಿದ್ದಾಗ ಆರೋಪಿ ಮನೆಗೆ ನುಗ್ಗಿದ್ದಾನೆ. ಅವನು ಮೊದಲಿಗೆ  2,000 ಡಾಲರ್ (41,229 ರೂ) ಹೊಂದಿರುವ ವ್ಯಾಲೆಟ್ ತೆಗೆದುಕೊಂಡ ನಂತರ ಬೆಲೆಬಾಳುವ ವಸ್ತುಗಳನ್ನು ಹುಡುಕುತ್ತಾ ಮಲಗುವ ಕೋಣೆಗೆ ಪ್ರವೇಶಿಸಿದ್ದಾನೆ. 

ಆಗ ದಂಪತಿಗಳು ಎಚ್ಚರವಾಗಿದ್ದಾರೆ. ಆಗ ಆರೋಪಿ ಅವರನ್ನು ಬಲವಾಗಿ ಮಾರಕಾಸ್ತ್ರಗಳಿಂದ ಇರಿದಿದ್ದಾನೆ. ಮತ್ತು ಅವರು ಸಾವನ್ನಪ್ಪುವವರೆಗೂ ಸತತವಾಗಿ ಇರಿದಿದ್ದಾನೆ. ಆಗ 18 ವರ್ಷದ ಮಗಳು ಎಚ್ಚರಗೊಂಡು ರಕ್ತದ  ಮಡುವಿನಲ್ಲಿ ಬಿದ್ದಿದ್ದ ಹೆತ್ತವರನ್ನು ನೋಡಿದ್ದಾಳೆ. ಆಗ ಆರೋಪಿ ಅವಳ ಕುತ್ತಿಗೆಗೆ ಇರಿದು ತಪ್ಪಿಸಿಕೊಂಡಿದ್ದ.  ಆಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವಳು ಪೋಲೀಸರಿಗೆ ಕರೆ ಮಾಡಿದ್ದಾಳೆ. 

ಪೋಲೀಸರು ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆ ಮಾಡಿದ್ದಾರೆ. ಬಳಿಕ ಎಮಿರೇಟ್‌ನಲ್ಲಿ ತಂಗಿದ್ದ ಶಂಕಿತನನ್ನು ಗುರುತಿಸಿದ್ದಾರೆ.ದುಬೈ ಪೊಲೀಸರ ಅಪರಾಧ ತನಿಖಾ ವಿಭಾಗದ ನಿರ್ದೇಶಕರ ಸಹಾಯಕ ಕರ್ನಲ್ ಆದಿಲ್ ಅಲ್ ಜೋಕರ್, ಶಂಕಿತ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. "ಆರೋಪಿಯು ವರ್ಷದ ಹಿಂದೆ ಉದ್ಯಮಿಯ ಮನೆಯಲ್ಲಿ ನಿರ್ವಹಣೆ ಜವಾಬ್ದಾರಿ ಹೊಂದಿದ್ದ. ಆ ವೇಳೆ ತನ್ನ ಯಜಮಾನನ ಬಳಿ ದೊಡ್ಡ ಪ್ರಮಾಣದ ಹಣವಿರುವುದು ತಿಳಿದಿದ್ದಾನೆ. ಇದರಿಂದಾಗಿ ಆತನಿಗೆ ಹಣದ ಆಸೆಯಾಗಿ ಮನೆಯನ್ನು ದೋಚಲು ತೀರ್ಮಾನಿಸಿದ್ದಾನೆ. ಕೃತ್ಯ ನಡೆಸಿದ್ದ ದಿನ ಆತ ಚಾಕುವನ್ನು ಖರೀದಿಸಿದ್ದ. " ಎಂದಿದ್ದಾರೆ. 

ಮನೆಯಿಂದ ಕೆಲ ಆಭರಣಗಳನ್ನು ಸಹ ಕಳವು ಮಾಡಲಾಗಿತ್ತು. ಅದನ್ನೀಗ ವಶಪಡಿಸಿಕೊಳ್ಳಲಾಗಿದೆ. ಕಾನ್ಸುಲ್ ಜನರಲ್ ವಿಪುಲ್"ಈ ಘಟನೆ ತುಂಬಾ ದುರದೃಷ್ಟಕರ ಮತ್ತು ಕಾನ್ಸುಲೇಟ್ ಮೃತ ದಂಪತಿಗಳ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com