
ಚಿತ್ರ
ಇಸ್ಲಾಮಾಬಾದ್: ಮುಂಬರುವ "ಪಾಕಿಸ್ತಾನ ಡೇ" ಕಾರ್ಯಕ್ರಮದ ಪೂರ್ವಾಭ್ಯಾಸದ ಸಂದರ್ಭದಲ್ಲಿ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಎಫ್-16 ಯುದ್ಧ ವಿಮಾನ ಪತನಗೊಂಡಿದೆ.
ಬುಧವಾರ ರಾಜಧಾನಿ ಇಸ್ಲಾಮಾಬಾದ್‌ನ ಶಕಾರ್‌ಪರಿಯನ್ ಎಂಬಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎಂದು ಪಿಎಎಫ್ ವಕ್ತಾರ ಸೈಯದ್ ಅಹ್ಮದ್ ರಝಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಏರ್ ಹೆಡ್ ಕ್ವಾರ್ಟರ್ಸ್ ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಹೇಳಿಕೆಯಲ್ಲಿ ವಿಮಾನದ ಪೈಲಟ್‌ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. "ನಾವು ನಷ್ಟವನ್ನು ಪರಿಶೀಲಿಸುತ್ತಿದ್ದೇವೆ" ಎಂದು ಪಿಎಎಫ್ ವಕ್ತಾರರು ತಿಳಿಸಿದ್ದಾರೆ.
Pakistani Air Force jet crashes in Islamabad (full VIDEO)
— Raza Akram (@RazaAkram222) March 11, 2020
F-16 crashed during rehearsal of 23rd march preparations#Islamabad #F16 #PAF pic.twitter.com/0D5bXpJxK1