'ಚೈನೀಸ್ ವೈರಸ್' ಪದ ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇಡೀ ಪ್ರಪಂಚವನ್ನು ತಲ್ಲಣಗೊಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ಅಮೆರಿಕ, ಚೀನಾ ನಡುವೆ ವಾಕ್ಸಮರ ಮುಂದುವರಿದೆ. 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇಡೀ ಪ್ರಪಂಚವನ್ನು ತಲ್ಲಣಗೊಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ಅಮೆರಿಕ, ಚೀನಾ ನಡುವೆ ವಾಕ್ಸಮರ ಮುಂದುವರಿದೆ.

'ಚೈನೀಸ್ ವೈರಸ್' ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ವಿರುದ್ದ ಚೀನಾ ವ್ಯಕ್ತಪಡಿಸಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ವೈರಸ್ ಚೀನಾದಿಂದ ಬಂದಿರುವ ಕಾರಣ 'ಚೈನೀಸ್ ವೈರಸ್' ಪದ ಸೂಕ್ತ ಎಂಬುದು ತಮ್ಮ ಭಾವನೆ ಎಂದು ಟ್ರಂಪ್ ಹೇಳಿದ್ದಾರೆ. 

ಕೋವಿಡ್ -19 ಸೋಂಕು ಹರಡಲು ಅಮೆರಿಕ ಸೇನೆ ಕಾರಣ ಎಂದು ಚೀನಾ ಅಪಪ್ರಚಾರ ನಡೆಸುತ್ತಿದೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸೇನೆ ಚೀನೀಯರಿಗೆ ಈ ವೈರಸ್ ಹರಡಿಸಿದೆ ಎಂದು ಚೀನಾ ಹೇಳುತ್ತಿರುವುದು ನ್ಯಾಯವಲ್ಲ, ಅಮೆರಿಕ ಸೇನೆ ಅದನ್ನು ಯಾರಿಗೂ ಹಬ್ಬಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಅಮೆರಿಕಾದಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದ್ದು,. ಮೂರು ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, 62 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪ್ರಪಂಚದಾದ್ಯಂತ ಹರಡುತ್ತಿದೆ, ವಿಶ್ವಾದ್ಯಂತ 1,83,579 ಪ್ರಕರಣಗಳು ವರದಿಯಾಗಿದ್ದು 7,400 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com