ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ, ಐಎಸ್ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ ಸಿಖ್ ಸಮುದಾಯ  

ಕಾಬೂಲ್ ನ ಗುರುದ್ವಾರದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದವರ ಕುಟುಂಬಗಳು ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. 
ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ, ಐಎಸ್ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ ಸಿಖ್ ಸಮುದಾಯ  

ಕಾಬೂಲ್: ಕಾಬೂಲ್ ನ ಗುರುದ್ವಾರದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದವರ ಕುಟುಂಬಗಳು ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. 

ಮಾ.25 ರಂದು ಅಫ್ಘಾನಿಸ್ತಾನದ ರಾಜಧಾನಿ ಕಬೂಲ್ ನ ಪ್ರಮುಖ ಗುರುದ್ವಾರಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ಇಸ್ಲಾಮಿಕ್ ಸ್ಟೇಟ್ ನ ಆತ್ಮಾಹುತಿ ದಾಳಿ ಬಾಂಬರ್ ನಡೆಸಿದ ದಾಳಿಯಲ್ಲಿ 25 ಸಿಖ್ ಜನಾಂಗದವರು ಸಾವನ್ನಪ್ಪಿದ್ದರು. 8 ಜನ ಗಾಯಗೊಂಡಿದ್ದರು. ಸಾವನ್ನಪ್ಪಿದವರ ಅಂತ್ಯಕ್ರಿಯೆ ವೇಳೆಯಲ್ಲೂ ಸಹ ಭಯೋತ್ಪಾದಕರ ದಾಳಿ ನಡೆದಿದ್ದು, ಕುಟುಂಬ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ, ಐಎಸ್ ದಾಳಿಯ ಬಗ್ಗೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com