ಕೋವಿಡ್-19: ನನ್ನ ಸಾವನ್ನು ಘೋಷಿಸಲು ವೈದ್ಯರು ಸಿದ್ಧರಾಗಿದ್ದರು - ಬ್ರಿಟನ್ ಪ್ರಧಾನಿ

ತಮ್ಮ ಸಾವನ್ನು ಘೋಷಿಸಲು ವೈದ್ಯರು ಸಿದ್ಧತೆ ನಡೆಸಿದ್ದರು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಾವು ಎದುರಿಸಿದ ಕಠಿಣ ಸನ್ನಿವೇಶವನ್ನು ಬಹಿರಂಗಪಡಿಸಿದ್ದಾರೆ.
ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್

ಲಂಡನ್: ತಮ್ಮ ಸಾವನ್ನು ಘೋಷಿಸಲು ವೈದ್ಯರು ಸಿದ್ಧತೆ ನಡೆಸಿದ್ದರು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಾವು ಎದುರಿಸಿದ ಕಠಿಣ ಸನ್ನಿವೇಶವನ್ನು ಬಹಿರಂಗಪಡಿಸಿದ್ದಾರೆ. 

ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿರುವ ಬೋರಿಸ್ ಜಾನ್ಸನ್ ಅವರು ನಾನು ಸತ್ತೆ ಹೋಗುತ್ತೆನೆಂದು ವೈದ್ಯರು ಅದನ್ನು ಘೋಷಿಸಲು ಸಿದ್ಧತೆ ನಡೆಸಿದ್ದರು ಎಂದು ಹೇಳಿದ್ದಾರೆ. 

ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬ ಅರಿವಾಗಿದ್ದು ವೈದ್ಯರು ಸಾವಿನ ಘೋಷಣೆಗೆ ಸಿದ್ಧರಾಗಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಅದು ನನಗೆ ಕಠಿಣ ಕ್ಷಣಗಳಾಗಿತ್ತು. ಒಂದು ವೇಳೆ ಪರಿಸ್ಥಿತಿ ಕೈಮೀರಿ ಹೋದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಸಿದ್ದತೆಗಳನ್ನು ಮಾಡಿಕೊಂಡಿದ್ದರು ಎಂದು ದಿ ಸನ್ ಪತ್ರಿಕೆ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. 

ಬ್ರಿಟನ್ ನಲ್ಲಿ 182,260 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು 28,131 ಮಂದಿ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com