ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಜೈಲಿಗಟ್ಟಿದ ಸಿಂಗಪೂರ್ ಕೋರ್ಟ್ 

ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಸಿಂಗಪೂರ್ ಕೋರ್ಟ್ 7 ತಿಂಗಳ ಕಾಲ ಜೈಲಿಗೆ ಕಳಿಸಿದೆ. 
ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಜೈಲಿಗಟ್ಟಿದ ಸಿಂಗಪೂರ್ ಕೋರ್ಟ್
ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಜೈಲಿಗಟ್ಟಿದ ಸಿಂಗಪೂರ್ ಕೋರ್ಟ್

ಸಿಂಗಪೂರ್: ಕೋವಿಡ್-19 ಕ್ರಮ ಪಾಲಿಸದ, ಪೊಲೀಸರನ್ನು ನಿಂದಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಸಿಂಗಪೂರ್ ಕೋರ್ಟ್ 7 ತಿಂಗಳ ಕಾಲ ಜೈಲಿಗೆ ಕಳಿಸಿದೆ. 

ರವಿ ಸಿನ್ನತಂಬಿ ಸುಬ್ರಹ್ಮಣಿಯಮ್ ಸಮಾಜಕ್ಕೆ ಅಪಾಯವಾಗಿದ್ದು ಹಲವಾರು ಅಪರಾಧಗಳಲ್ಲಿ ತೊಡಗಿದ್ದು, ಎರಡು ಪ್ರಕರಣಗಳಲ್ಲಿ ಆರೋಗ್ಯಾಧಿಕಾರಿಗಳು, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಹಾಗೂ ಮೂರನೇ ಪ್ರಕರಣದಲ್ಲಿ ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಯ ವಿರುದ್ಧ ಇನ್ನೂ 5 ಗುರುತರ ಪ್ರಕರಣಗಳು ದಾಖಲಾಗಿದೆ. 

ಮತ್ತೊಂದು ಪ್ರಕರಣಗಳಲ್ಲಿ ರವಿ ಸಿನ್ನತಂಬಿ ಸುಬ್ರಹ್ಮಣಿಯಮ್ ಸರತಿ ಸಾಲಿನಲ್ಲಿ ನಿಂತಿದ್ದಾಗ ಮದ್ಯ ಸೇವನೆ ಮಾಡಿ ಸರತಿ ಸಾಲಿನ ಬಗ್ಗೆ ಆರೋಪ ಮಾಡಿದ್ದ. ಈ ಬಗ್ಗೆ ಪ್ರಶ್ನಿಸಿದ್ದ ಪೊಲೀಸರನ್ನೇ ನಿಂದಿಸಿದ ಪರಿಣಾಮ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com